Friday, January 9, 2026

ಮನೆಯ ಆಧಾರಸ್ಥಂಭವೇ ಇಲ್ಲಿ ಆಸ್ಪತ್ರೆ ಸೇರಿದೆ: ಸುರೇಶ್ ನಾಯ್ಕ್ ಬದುಕಿಗೆ ನೀವು ಆಧಾರವಾಗುವಿರಾ?

ಹೊಸದಿಗಂತ ಮಂಗಳೂರು:

ಮನೆಗೆ ಆಧಾರಸ್ಥಂಭವಾಗಿದ್ದ ಮಂದಿ ಹಠಾತ್ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದರೆ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ಈ 34ರ ಹರೆಯದ ಸುರೇಶ್ ನಾಯ್ಕ್ ಅವರ ಕಥೆಯೂ ಹೀಗೆಯೇ….

ಮನೆಗೆ ಆಧಾರ ಸ್ಥಂಭವಾಗಿದ್ದ ಇವರು ಈಗ ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿ ನಿರ್ಮಾಣವಾಗಿದೆ. ಮೆದಳಿನ ರಕ್ತಸ್ರಾವ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಆಸ್ಪತ್ರೆಯಲ್ಲಿಯೇ ಕಳೆಯುವ ಸ್ಥಿತಿ. ಇದ್ದ ಹಣವನ್ನೆಲ್ಲ ಚಿಕಿತ್ಸೆಗೆ ಬಳಸಿದ ಮನೆ ಮಂದಿ ಇದೀಗ ಮುಂದಿನ ಚಿಕಿತ್ಸೆಗಾಗಿ ಹಣ ಹೊಂದಿಸಲು ಆಗದೆ ದಾನಿಗಳ ಮೊರೆ ಹೋಗಿದ್ದಾರೆ.

ಮುಂದಿನ ಚಿಕಿತ್ಸೆಗೆ ವೈದ್ಯರು ಸುಮಾರು 15 ಲಕ್ಷದಷ್ಟು ವೆಚ್ಚವಾಗುವ ಬಗ್ಗೆ ಸೂಚಿಸಿದ್ದು, ಇಷ್ಟು ಹಣವನ್ನು ಭರಿಸುವ ಶಕ್ತಿ ಹೊಂದಿಲ್ಲ. ಆದ್ದರಿಂದ ದಾನಿಗಳ ನೆರವಿನ ನಿರೀಕ್ಷೆಯನ್ನು ಕುಟುಂಬ ಎದುರು ನೋಡುತ್ತಿದೆ.

ಸುರೇಶ್ ನಾಯ್ಕ್ ಅವರ ಚಿಕಿತ್ಸೆಗೆ ನೆರವಾಗುವ ಸಹೃದಯಿ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಯ ಮೂಲಕ ನೆರವಾಗಬಹುದು.

ಬ್ಯಾಂಕ್ ವಿವರ:

ಸುರೇಶ್ ನಾಯ್ಕ್ ಡಿ
ಕೆನರಾ ಬ್ಯಾಂಕ್ ಮೈಸೂರು ಬ್ರಾಂಚ್
ಖಾತೆ ಸಂಖ್ಯೆ: 110257552289
IFSC CODE : CNRB 0005151
ಮೊಬೈಲ್ ಸಂಖ್ಯೆ: 9066785156

ನೆರವಾಗುವಿರಾ…

error: Content is protected !!