Saturday, September 20, 2025

ನಂದಿನಿ ಹಾಲಿನ ಉತ್ಪನ್ನಗಳ ದರ ಇಳಿಕೆ! ಹೊಸ ರೇಟ್ ಪಟ್ಟಿ‌ ಹೀಗಿದೆ..

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ ಮಾಡಿದ ಕಾರಣ ಕರ್ನಾಟಕದಲ್ಲಿ ನಂದಿನಿ ಉತ್ಪನ್ನಗಳ ದರವನ್ನು ಕೆಎಂಎಫ್ ಇಳಿಕೆ ಮಾಡುತ್ತಿದೆ.

ಸೆಪ್ಟೆಂಬರ್ 22 ರಿಂದ ಹೊಸ ದರ ಜಾರಿಗೆ ಬರಲಿದೆ. ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದು, ಗ್ರಾಹಕರಿಗೆ ದಸರಾ ಉಡುಗೊರೆ ನೀಡುತ್ತಿದ್ದವೆ ಎಂದಿದ್ದಾರೆ. ಪರಿಷ್ಕೃತ ದರ ವಿವರವನ್ನೂ ಹಂಚಿಕೊಂಡಿದ್ದಾರೆ.

ನಂದಿನಿ ಹಾಲಿನ ಉತ್ಪನ್ನಗಳ ಹೊಸ ದರ ಪಟ್ಟಿ (ರೂಪಾಯಿಗಳಲ್ಲಿ)

ನಂದಿನಿ ತುಪ್ಪ (1000 ಮಿ.ಲಿ ಪೌಚ್)
650 – ಹಳೆ ದರ
610 – ಹೊಸ ದರ
ಬೆಣ್ಣೆ – ಉಪ್ಪುರಹಿತ (500 ಮಿ.ಲಿ)
305- ಹಳೆ ದರ
286- ಹೊಸ ದರ
ಪನೀರ್ (1000 ಗ್ರಾಂ)
425 – ಹಳೆ ದರ
408 – ಹೊಸ ದರ
ಗುಡ್ ಲೈಫ್ ಹಾಲು (1 ಲೀಟರ್)
70 – ಹಳೆ ದರ
68 – ಹೊಸ ದರ
ಚೀಸ್ (1 ಕೆಜಿ)
480 – ಹಳೆ ದರ
450 – ಹೊಸ ದರ
ಚೀಸ್ – ಸಂಸ್ಕರಿಸಿದ್ದು
530- ಹಳೆ ದರ
497- ಹೊಸ ದರ
ಐಸ್ ಕ್ರೀಮ್‌ಗಳು – ವೆನಿಲ್ಲಾ ಟಬ್ (1000- ಮಿ.ಗ್ರಾಂ)
200- ಹಳೆ ದರ
178- ಹೊಸ ದರ
ಐಸ್ ಕ್ರೀಮ್ ಫ್ಯಾಮಿಲಿ ಪ್ಯಾಕ್ (5000ಮಿ.ಲಿ)
645- ಹಳೆ ದರ
574- ಹೊಸ ದರ
ಐಸ್ ಕ್ರೀಮ್ ಚಾಕೊಲೇಟ್ ಸಂಡೇ (500ಮಿ.ಲಿ)
115- ಹಳೆ ದರ
102- ಹೊಸ ದರ
ಐಸ್ ಕ್ರೀಮ್ – ಮ್ಯಾಂಗೋ ನ್ಯಾಚುರಲ್ಸ್ (100 ಗ್ರಾ)
35- ಹಳೆ ದರ
31- ಹೊಸ ದರ

ಇದನ್ನೂ ಓದಿ