April 9, 2026
Thursday, April 9, 2026
spot_img

ಅಂಕಪಟ್ಟಿ ಭವಿಷ್ಯ ನಿರ್ಧರಿಸದು: ಸೋತವನೇ ಗೆಲ್ಲೋದು.. ಬದುಕಿನ ದೊಡ್ಡ ಪರೀಕ್ಷೆಯಲ್ಲಿ ಪಾಸ್ ಆಗೋಕೆ ಸಾವಿರ ದಾರಿಗಳಿವೆ

ಪರೀಕ್ಷೆಯ ಫಲಿತಾಂಶ ಬಂದಾಗ ನಿರೀಕ್ಷಿತ ಅಂಕ ಬರದಿದ್ದಲ್ಲಿ ಅಥವಾ ಅನುತ್ತೀರ್ಣರಾದಾಗ ಮನಸ್ಸಿಗೆ ನಿರಾಸೆ ಮೂಡುವುದು ಸಹಜ. ಆದರೆ ನೆನಪಿಡಿ, ಒಂದು ಪರೀಕ್ಷೆಯ ಅಂಕಗಳು ನಿಮ್ಮ ಇಡೀ ಜೀವನದ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲ. ಸೋಲು ಎಂಬುದು ಕೇವಲ ಕಲಿಕೆಯ ಒಂದು ಭಾಗವಷ್ಟೇ ಹೊರತು ಅದು ಅಂತ್ಯವಲ್ಲ.

ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಿದ ಅನೇಕರು ಶಾಲಾ-ಕಾಲೇಜು ಪರೀಕ್ಷೆಗಳಲ್ಲಿ ಹಿಂದೆ ಬಿದ್ದವರೇ. ಆದರೆ ಅವರು ಜೀವನದ ಪರೀಕ್ಷೆಯಲ್ಲಿ ಸೋಲೊಪ್ಪಿಕೊಳ್ಳಲಿಲ್ಲ. ಪರೀಕ್ಷೆ ಫೇಲ್ ಆಯಿತು ಎಂಬ ಕಾರಣಕ್ಕೆ ಜೀವನವನ್ನೇ ನಿರಾಸೆಯಿಂದ ಕಳೆಯಬೇಡಿ. ನಿಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಸಾಧನೆ ಮಾಡಲು, ಹೊಸತನ್ನು ಕಲಿಯಲು ಮತ್ತು ಮರಳಿ ಪ್ರಯತ್ನಿಸಲು ಜೀವನದಲ್ಲಿ ನೂರಾರು ಅವಕಾಶಗಳು ನಿಮಗಾಗಿ ಕಾಯುತ್ತಿವೆ.

ಧೈರ್ಯವೇ ಯಶಸ್ಸಿನ ಮೊದಲ ಮೆಟ್ಟಿಲು. ಸೋಲನ್ನು ಅನುಭವವಾಗಿ ಸ್ವೀಕರಿಸಿ, ಅಸ್ತ್ರವಾಗಿ ಬಳಸಿ. ನಿಮ್ಮ ಪ್ರತಿಭೆ ಕೇವಲ ಉತ್ತರ ಪತ್ರಿಕೆಗೆ ಸೀಮಿತವಾಗಿಲ್ಲ, ನಿಮ್ಮ ಮೇಲೆ ನಂಬಿಕೆ ಇರಲಿ, ಈ ಬಾರಿಯ ಹಿನ್ನಡೆ ಮುಂದಿನ ದೊಡ್ಡ ಜಯಕ್ಕೆ ಮುನ್ನುಡಿಯಾಗಲಿ!

“ಗೆದ್ದಾಗ ಬೀಗಬೇಡ, ಸೋತಾಗ ಕುಗ್ಗಬೇಡ. ಯಾಕೆಂದರೆ ಜೀವನ ಎಂಬುದು ನಿರಂತರವಾಗಿ ಕಲಿಯುವ ಪಾಠ.”

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !