January22, 2026
Thursday, January 22, 2026
spot_img

ಅಪ್ಪ,ಅಮ್ಮ ಫ್ರೆಂಡ್ಸ್‌ ಜೊತೆ ಸ್ಮಿಮ್ಮಿಂಗ್‌ ಮಾಡ್ತೀನಿ ಎಂದು ಹೋಗಿದ್ದ ಮಗ ಮತ್ತೆ ಬರಲೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲ್ಲೂಕಿನ ಬಂಡಿಹಳ್ಳಿಯಲ್ಲಿ ನಡೆದಿದೆ.

ಪೃಥ್ವಿ (10) ಮೃತ ಬಾಲಕ. ಶಿಕ್ಷಕ ಯು.ಗೋಣಿಬಸಪ್ಪ ಎಂಬುವವರ ಪುತ್ರನಾಗಿದ್ದು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್‌ಇ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.

ತರಗತಿಯ ಐದು ಜನ ಸ್ನೇಹಿತರೊಂದಿಗೆ ಸೇರಿ ಬಂಡಿಹಳ್ಳಿಯ ಕೆರೆಗೆ ಈಜಲು ತೆರಳಿದ್ದರು.ಈಜಲು ಹೋಗುವ ಮುನ್ನ ತಂದೆ ತಾಯಿಗೆ ಸ್ಮಿಮ್ಮಿಂಗ್‌ ಮಾಡಿ ಬರ್ತೀನಿ ಎಂದು ಪೃಥ್ವಿ ಹೇಳಿ ಹೋಗಿದ್ದ. ನೀರಿನಲ್ಲಿ ಈಜುವಾಗ ಪೃಥ್ವಿ ಹಾಗೂ ಇನ್ನೋರ್ವ ಬಾಲಕ ಆಕಾಶ್ ನೀರಿನಲ್ಲಿ ಮುಳುಗುತ್ತಿದ್ದರು. ಇದನ್ನು ಗಮನಿಸಿದ ಕುರಿಗಾಹಿಗಳು ಆಕಾಶ್ ಅನ್ನು ರಕ್ಷಿಸಿದ್ದು, ಪೃಥ್ವಿ ಮೃತಪಟ್ಟಿದ್ದಾನೆ. ಈ ಸಂಬಂಧ ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read