February 11, 2026
Wednesday, February 11, 2026
spot_img

ಪುಟಾಣಿಗಳ ಸ್ವರಲಹರಿಗೆ ವೇದಿಕೆ ಸಜ್ಜು: ಶುರುವಾಗ್ತಿದೆ ‘ಸರಿಗಮಪ ಲಿಟಲ್ ಚಾಂಪ್ಸ್’ ಮಹಾ ಆಡಿಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ‘ಸ ರಿ ಗ ಮ ಪ’ ಇದೀಗ ಹೊಸ ಕಳೆ ಮತ್ತು ಉತ್ಸಾಹದೊಂದಿಗೆ ಮರಳಿ ಬರುತ್ತಿದೆ. ಜೀ ಕನ್ನಡ ವಾಹಿನಿಯು ಮಕ್ಕಳಿಗಾಗಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಹೊಸ ಆವೃತ್ತಿಯನ್ನು ಘೋಷಿಸಿದ್ದು, ರಾಜ್ಯದಾದ್ಯಂತ ಪ್ರತಿಭೆಗಳ ಹುಡುಕಾಟ ಆರಂಭಿಸಿದೆ.

ಆಡಿಷನ್ ವಿವರಗಳು ಮತ್ತು ನಿಯಮಗಳು:

ಮಕ್ಕಳ ಹಾಡಿನ ಪ್ರತಿಭೆಯನ್ನು ಹೊರಹಾಕಲು ಇದು ಸುವರ್ಣಾವಕಾಶ. ಆಡಿಷನ್‌ನಲ್ಲಿ ಭಾಗವಹಿಸುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನಿಸಿ:

ವಯೋಮಿತಿ: 3 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶ.

ಸ್ಪರ್ಧಿಗಳು 3 ವಿಭಿನ್ನ ಶೈಲಿಯ ಹಾಡುಗಳನ್ನು ಕಲಿಯುವುದು ಕಡ್ಡಾಯ.

ನಿಯಮ: ಹಾಡುವಾಗ ಯಾವುದೇ ರೀತಿಯ Karaoke ಬಳಸುವಂತಿಲ್ಲ.

ದಾಖಲೆಗಳು: ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ವಿಳಾಸದ ಪುರಾವೆ ಜೆರಾಕ್ಸ್ ಪ್ರತಿಗಳನ್ನು ತರಬೇಕು.

ಈ ಆಡಿಷನ್‌ನಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಜಿಲ್ಲಾವಾರು ಆಡಿಷನ್ ವೇಳಾಪಟ್ಟಿ:

ಫೆಬ್ರವರಿ 14 (ಶನಿವಾರ) ಕೊಪ್ಪಳ, ಶಿವಮೊಗ್ಗ, ತುಮಕೂರು
ಫೆಬ್ರವರಿ 15 (ಭಾನುವಾರ) ಬಳ್ಳಾರಿ, ಉಡುಪಿ, ಬೆಂಗಳೂರು
ಫೆಬ್ರವರಿ 16 (ಸೋಮವಾರ) ರಾಯಚೂರು, ಮಂಗಳೂರು
ಫೆಬ್ರವರಿ 17 (ಮಂಗಳವಾರ) ಯಾದಗಿರಿ, ಚಿತ್ರದುರ್ಗ, ಮಡಿಕೇರಿ
ಫೆಬ್ರವರಿ 18 (ಬುಧವಾರ) ಚಿಕ್ಕಮಗಳೂರು, ದಾವಣಗೆರೆ
ಫೆಬ್ರವರಿ 19 (ಗುರುವಾರ) ಬೀದರ್, ಹಾವೇರಿ
ಫೆಬ್ರವರಿ 20 (ಶುಕ್ರವಾರ) ಕಲಬುರಗಿ, ಮಂಡ್ಯ, ಶಿರಸಿ
ಫೆಬ್ರವರಿ 21 (ಶನಿವಾರ) ವಿಜಯಪುರ, ಬೆಳಗಾವಿ, ಹಾಸನ
ಫೆಬ್ರವರಿ 22 (ಭಾನುವಾರ) ಬಾಗಲಕೋಟೆ, ಮೈಸೂರು, ಹುಬ್ಬಳ್ಳಿ
ಫೆಬ್ರವರಿ 23 (ಸೋಮವಾರ) ಗದಗ್
ಫೆಬ್ರವರಿ 24 (ಮಂಗಳವಾರ) ವಿಜಯನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ
ಫೆಬ್ರವರಿ 25 (ಬುಧವಾರ) ರಾಮನಗರ, ಕೋಲಾರ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !