March 14, 2026
Saturday, March 14, 2026
spot_img

ರಾಜ್ಯಕ್ಕೆ ಏನೂ ಅನುಕೂಲ ಆಗಿಲ್ಲ, ಯಾವ ಸ್ಪೀಡ್‌ ರೈಲೂ ಬೆಂಗಳೂರಿಗೆ ಬರೋದಿಲ್ಲ: ಡಿಕೆಶಿ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಬಜೆಟ್‌ ಮಂಡನೆಯಾಗಿದೆ. ಆದರೆ ನಮ್ಮ ರಾಜ್ಯಕ್ಕೆ ಏನ್ರೀ ಸಿಕ್ತು? ಏನೂ ಇಲ್ಲ. ಬುಲೆಟ್‌ ಟ್ರೈನ್‌ ಬರತ್ತೆ ಅಂತ ಕಾಯ್ಕೊಂಡು ಕೂರ್ಬೇಡಿ, ಯಾವ ಸ್ಪೀಡ್‌ ರೈಲೂ ಬರೋದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವ್ಯಂಗ್ಯ ಮಾಡಿದ್ದಾರೆ.

ನಾನು ಇಷ್ಟೊತ್ತು ಗಮನಿಸಿದೆ, ಈಗೇನೋ ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ನಾವು ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಬದಲಾವಣೆ ವಾಪಸ್ ತೆಗೆದುಕೊಳ್ಳಲಿ. ಹಿಂದೆ ಯಾವ ಸ್ಕೀಂ ಇತ್ತು ಅದೇ ಸ್ಕೀಂ ಮುಂದುವರೆಯಲಿ. 60:40 ಯಾವುದೇ ಕಾರಣಕ್ಕೂ ನಡೆಯಲ್ಲ. ಯಾವ ಸರ್ಕಾರವೂ ಬಂಡವಾಳ ಹಾಕಲು ಆಗಲ್ಲ ಎಂದರು.

ಯಾವ ಹೈಸ್ಪೀಡ್ ರೈಲು ರೀ? ಯಾವ ಸ್ಪೀಡ್ ರೈಲೂ ಬರಲ್ಲ. 50:50 ಅನುಪಾತದಲ್ಲಿ ಮಾಡಲು ಆಗಲ್ಲ, ಬೇಕಿದ್ರೆ 90:10 ಕೊಡಲಿ. ಆಗ ನಾವು 10% ನಾವು ಕೊಡುತ್ತೇವೆ. ಬೇರೆ ರಾಜ್ಯಗಳಿಗೆ ಅವರೇ ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯಕ್ಕೂ 90% ಮಾಡಲಿ. ಬೆಂಗಳೂರು ಬಗ್ಗೆ ಅತಿಹೆಚ್ಚು ನಿರೀಕ್ಷೆ ಇತ್ತು. ಮೋದಿಯವರೇ ಇದನ್ನ ಗ್ಲೋಬಲ್ ಸಿಟಿ ಅಂತ ಹೇಳಿದರು. ಆ ಗ್ಲೋಬಲ್ ಸಿಟಿಗೆ ಏನು ಒತ್ತು ಕೊಟ್ಟಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !