March 26, 2026
Thursday, March 26, 2026
spot_img

ಬಿಸಿಲು ಅಂದ್ಮೇಲೆ ಎಲ್ಲರಿಗೂ ಒಂದೇ! ಬನ್ನೇರುಘಟ್ಟದ ಝೂನಲ್ಲಿರೋ ಪ್ರಾಣಿಗಳಿಗೂ ಐಸ್‌ಕ್ರೀಂ, ಕೂಲ್‌ ಡ್ರಿಂಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಸಿಲು ಅಂದ್ಮೇಲೆ ಎಲ್ಲರಿಗೂ ಒಂದೇ ಅಲ್ವಾ? ಮನುಷ್ಯರ ರೀತಿ ಪ್ರಾಣಿಗಳಿಗೂ ಸೆಖೆ ಆಗುತ್ತದೆ. ಬೇಸಿಗೆಯಲ್ಲಿ ನಮಗೆ ಬೇಕಿರೋ ಐಸ್‌ಕ್ರೀಂ ಹಾಗೂ ಕೂಲ್‌ ಡ್ರಿಂಕ್ಸ್‌ ಪ್ರಾಣಿಗಳಿಗೂ ಬೇಕಿದೆ. ಅಂತೆಯೇ ಬೆಂಗಳೂರಿನ ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿರುವ ಪ್ರಾಣಿಗಳಿಗೆ ಜ್ಯೂಸ್‌ ಹಾಗೂ ಐಸ್‌ಕ್ರೀಂ ನೀಡಲಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ರಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಝೂ ಸಿಬ್ಬಂದಿ ಪ್ರಾಣಿಗಳಿಗೆ ಎಳನೀರು, ಹಣ್ಣು, ತರಕಾರಿ ಬಳಸಿ ಲಾಲಿಪಾಪ್ ಮತ್ತು ಐಸ್‌ಕ್ಯಾಂಡಿ ರೂಪದಲ್ಲಿ ಪೌಷ್ಠಿಕ ಆಹಾರ ನೀಡುತ್ತಿದ್ದಾರೆ.

ಆನೆ, ಜಿಂಕೆ, ಮಂಗ, ಕರಡಿ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ತಂಪಾದ ಆಹಾರ ಮತ್ತು ನೀರಿನ್ನು ನೀಡಲಾಗುತ್ತಿದೆ. ದಿನಕ್ಕೆ ಆನೆಗಳಿಗೆ ಸ್ನಾನ, ಕಲ್ಲಂಗಡಿ ಹಣ್ಣು ಮತ್ತು ನೀರಿನ ಹೊಂಡಗಳ ಮೂಲಕ ತಂಪಾದ ವಾತಾವರಣ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಸಹ ಮರಗಿಡಗಳ ನೆರವಿನಿಂದ ತಟ್ಟಿದ ಬಿಸಿಲಿನಿಂದ ರಕ್ಷಣೆ, ಕುಳಿತು ವಿಶ್ರಾಂತಿ ಪಡೆಯಲು ಶೆಲ್ಟರ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸಿಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !