February 4, 2026
Wednesday, February 4, 2026
spot_img

ನಗರದಲ್ಲಿ ಮತ್ತೆ ಶುರು ‘ಟೋಯಿಂಗ್’ ಹಾವಳಿ: ದಂಡದ ಮೊತ್ತ ಕೇಳಿದ್ರೆ ನೀವೇ ಶಾಕ್ ಆಗ್ತೀರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈಗ ಹೊಸ ಪ್ಲಾನ್ ರೆಡಿಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಸಂಚಾರ ಪೊಲೀಸ್ ಇಲಾಖೆ ಜಂಟಿಯಾಗಿ ಮತ್ತೆ ಟೋಯಿಂಗ್ ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿವೆ.

ಈಗಾಗಲೇ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳು ಟೋಯಿಂಗ್ ವಾಹನಗಳನ್ನು ಖರೀದಿ ಮಾಡಿದ್ದು, ಕಾರ್ಯಾಚರಣೆಗೆ ಸಜ್ಜಾಗಿವೆ. ಆದರೆ, ನಿಗದಿಪಡಿಸಲಾಗಿರುವ ಟೋಯಿಂಗ್ ದರ ಮಾತ್ರ ವಾಹನ ಸವಾರರ ನಿದ್ದೆಗೆಡಿಸುವಂತಿದೆ.

ದರ ಪಟ್ಟಿ ಹೀಗಿದೆ:

ನಾಲ್ಕು ಚಕ್ರದ ವಾಹನ: ₹1,000 ಟೋಯಿಂಗ್ ಚಾರ್ಜ್.

ದ್ವಿಚಕ್ರ ವಾಹನ: ₹500 ಟೋಯಿಂಗ್ ಚಾರ್ಜ್.

ಹೆಚ್ಚುವರಿ ದಂಡ: ಟೋಯಿಂಗ್ ದರದ ಜೊತೆಗೆ ಪ್ರತ್ಯೇಕವಾಗಿ 500 ಟ್ರಾಫಿಕ್ ಫೈನ್ ಕೂಡ ಪಾವತಿಸಬೇಕಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಒಂದು ಬೈಕ್ ಟೋಯಿಂಗ್ ಆದರೆ ನೀವು ಕನಿಷ್ಠ 1,000 ತೆರಬೇಕಾಗುತ್ತದೆ.

ಈ ಭಾರಿ ದರ ಏರಿಕೆಗೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. “ಇದು ವಾಹನ ಸವಾರರ ಮೇಲೆ ಹೇರುತ್ತಿರುವ ಮಿತಿಮೀರಿದ ಹೊರೆ, ಕೂಡಲೇ ದರ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು,” ಎಂದು ಎಚ್ಚರಿಕೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !