ಹೊಸದಿಗಂತ ವರದಿ ಸುಳ್ಯ:
ಶನಿವಾರ ಸಂಜೆ ಸುರಿದ ಭಾರಿ ಗಾಳಿ ಸಿಡಿಲನ ಅಬ್ಬರದ ಗಾಳಿ ಮಳೆಗೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕತ್ತಲೆಯಲ್ಲಿ ರಾತ್ರಿಗಳನ್ನು ಕಳೆದಿದ್ದಾರೆ.
ಸುಳ್ಯದಲ್ಲಿ ಮಳೆಗಾಲದಂತೆ ವಿಪರೀತ ಗಾಳಿ ಸಿಡಿಲಿನ ಅಬ್ಬರದೊಂದಿಗೆ ತಾಲೂಕಿನಾಧ್ಯಂತ ಮಳೆ ಸುರಿದ ಪರಿಣಾಮ ಶನಿವಾರ ಸಂಜೆಯಿಂದ ವಿದ್ಯುತ್ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ತಂತಿಗಳಿಗೆ ಅಲ್ಲಲ್ಲಿ ಮರದ ರೆಂಬೆಕೊಂಬೆಗಳು ಬಿದ್ದು ವಿದ್ಯುತ್ ಕಂಬಗಳು ಧರೆಶಾಹಿಯಾಗಿದ್ದು ತಾಲೂಕಿನಲ್ಲಿ 18 ಹೆಚ್ ಟಿ ತಂತಿಗಳ ಕಂಬ ಹಾಗೂ ಎಲ್ ಟಿ ತಂತಿಗಳು ಹಾದು ಹೋಗುವ 56 ಕಂಬಗಳು ಸೇರಿದಂತೆ 5 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ.
ಇದನ್ನೂ ಓದಿ:
ಈಗಾಗಲೇ ಗುತ್ತಿಗೆ ಆಧಾರಿತ ನೌಕರರು ಮತ್ತು ಮೆಸ್ಕಾಂ ಸಿಬ್ಬಂದಿಗಳಿಂದ ಪುನರ್ ಜೋಡಣ ಕಾರ್ಯ ಭರದಿಂದ ಸಾಗುತ್ತಿದ್ದು ಸಂಜೆಯ ವೇಳೆಗೆ ಪುನರ್ ಸಂಪರ್ಕಕ್ಕೆ ಸಂಪೂರ್ಣ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಬೆಳ್ಳಾರೆಯಿಂದ ಹಾದು ಬರುವ 33 ಕೆವಿ ಕಾಮಗಾರಿ ಪೂರ್ಣಗೊಂಡಿದ್ದರೂ ಮೊದಲ ಮಳೆಗೇ ಸುಳ್ಯ ಮಾತ್ರ ಕತ್ತಲಿನಲ್ಲಿ ಕಾಲ ಕಳೆಯುವಂತಾಗಿದ್ದು ವಿಪರ್ಯಾಸವೇ ಸರಿ.



