Friday, October 3, 2025

ಪಾಕಿಸ್ತಾನದ ಜೊತೆಗಿನ ಇನ್ನೂ ಕೊನೆಗೊಂಡಿಲ್ಲ: ಸೇನಾ ಮುಖ್ಯಸ್ಥ ಜ.ಉಪೇಂದ್ರ ದ್ವಿವೇದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರ್‌ನಿಂದ ಉಂಟಾದ ಪಾಕಿಸ್ತಾನದೊಂದಿಗಿನ ಸಂಘರ್ಷವು ಮೇ 10 ರ ಕದನ ವಿರಾಮದೊಂದಿಗೆ ಕೊನೆಗೊಂಡಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

‘ಆಪರೇಷನ್ ಸಿಂದೂರ್: ಬಿಫೋರ್ ಆ್ಯಂಡ್ ಬಿಯಾಂಡ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿಒಎಎಸ್ ಜನರಲ್ ದ್ವಿವೇದಿ, ಕದನ ವಿರಾಮದ ನಂತರವೂ ಪಾಕಿಸ್ತಾನದ ವಿರುದ್ಧದ ಯುದ್ಧ ಮುಂದುವರೆದಿದೆ ಎಂದು ಹೇಳಿದ್ದಾರೆ.

ಮೇ 10ರಂದು ಯುದ್ಧ ಮುಗಿದಿದೆ ಎಂದು ನೀವು ಭಾವಿಸುತ್ತಿರಬಹುದು. ಇಲ್ಲ. ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ಅದು ಬಹಳ ಕಾಲ ಮುಂದುವರೆಯಿತು. ಅದನ್ನು ಮೀರಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ನನಗೆ ಸಾಧ್ಯವಿಲ್ಲ ಎಂದು ಜನರಲ್ ದ್ವಿವೇದಿ ತಿಳಿಸಿದ್ದಾರೆ.

ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ಇನ್ನೂ ಕೊನೆಗೊಂಡಿಲ್ಲ. ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನಗಳು ಮುಂದುವರೆದಿವೆ ಎಂದು ಒತ್ತಿ ಹೇಳಿದ ಸೇನಾ ಮುಖ್ಯಸ್ಥ ದ್ವಿವೇದಿ, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಆಪರೇಷನ್ ಸಿಂದೂರ್‌ನ ಪರಿಣಾಮವನ್ನು ಸಂಪೂರ್ಣವಾಗಿ ನಿರ್ಣಯಿಸಲಾಗಿತ್ತು ಎಂದಿದ್ದಾರೆ.