ಮನೆಯಲ್ಲಿ ಅಮ್ಮನಿಗೆ ತಿಳಿಯದಂತೆ ಏನೋ ಅವಾಂತರ ಮಾಡಿ, ಕೊನೆಗೆ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ, ಅದೃಷ್ಟವಶಾತ್ ಅಥವಾ ಸಮಯಪ್ರಜ್ಞೆಯಿಂದ ತಾಯಿಯ ಕೋಪದಿಂದ ಬಚಾವ್ ಆಗುವ ಆ ಕ್ಷಣ ಇದೆಯಲ್ಲ… ಅದು ಒಲಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದಷ್ಟೇ ಸಂಭ್ರಮದ್ದು!
ಸಾಮಾನ್ಯವಾಗಿ ಅಮ್ಮನ ಕೈಯಲ್ಲಿ ಸಿಕ್ಕಾಕೊಂಡಾಗ ರಕ್ಷಣೆಗೆ ಬರುವುದು ಮೂರೇ ದಾರಿಗಳು: ಒಂದು ಅಪ್ಪನ ಎಂಟ್ರಿ, ಎರಡು ಅಮ್ಮನ ಮೂಡ್ ಸಡನ್ ಆಗಿ ಚೇಂಜ್ ಆಗುವುದು, ಅಥವಾ ಹತ್ತಿರದಲ್ಲಿ ಯಾರಾದರೂ ನೆಂಟರು ಇರುವುದು.
ತಪ್ಪು ಮಾಡಿದಾಗ ಎದೆಯಲ್ಲಿ ಶುರುವಾಗುವ ಆ ‘ಡವ ಡವ’ ಶಬ್ದ, ಅಮ್ಮನ ಕಣ್ಣುಗಳು ಕೆಂಪಾದಾಗ ಬರುವ ಬೆವರು… ಇವೆಲ್ಲವನ್ನೂ ದಾಟಿ “ಇವತ್ತು ಬಿಟ್ಟುಬಿಡ್ತೀನಿ, ಇನ್ನೊಮ್ಮೆ ಹೀಗಾಗಬಾರದು” ಎಂಬ ವಾರ್ನಿಂಗ್ ಸಿಕ್ಕಾಗ ಆಗುವ ಆನಂದವೇ ಬೇರೆ. ಆ ಕ್ಷಣದಲ್ಲಿ ಮನುಷ್ಯನಿಗೆ ಸಿಗುವ ‘ರಿಲೀಫ್’ ಇದ್ಯಾಲ “ಜೀವನ ಅಂದ್ರೆ ಇದೇ ಅಲ್ವಾ?” ಅನ್ನೋ ಅಷ್ಟು ಸಮಾಧಾನವಾಗೋದಂತು ಸತ್ಯ!



