ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತಗಳ್ಳತನದ ಬಗ್ಗೆ ದಾಖಲಾತಿಗಳು ಇವೆ ನಾಳೆ ರಾಹುಲ್ ಗಾಂಧಿ ಅದನ್ನು ಬಿಡುಗಡೆ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಾಳೆ ರಾಹುಲ್ ಗಾಂಧಿ ಪ್ರತಿಭಟನೆ ಮಾಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಮತಗಳವು ಬಗ್ಗೆ ಹೇಳಿದ್ದರು. ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಾರೆ. ನಿಮಗೆ ಏನು ದಾಖಲೆ ಬೇಕು ಕೊಡ್ತಾರೆ. ನಿಮ್ಮ ಮುಂದೆ ಬರುವಾಗ ದಾಖಲಾತಿ ಇಟ್ಟುಕೊಂಡು ಬರೋದು. ಮತಗಳುವು ಹೇಗೆ ಆಗಿದೆ ಎಂದು ಸಾಕ್ಷ್ಯಗಳಿವೆ. ಲೀಗಲ್ ಆಗಿಯೇ ನಾವು ಪ್ರೂವ್ ಮಾಡ್ತೇವೆ. ಸುಮ್ಮನೆ ಸುದ್ದಿಗೋಷ್ಠಿ ಮಾಡಿದ್ರೆ ಪ್ರಯೋಜನವೇನು? ದಾಖಲೆ ಇರೋದ್ರಿಂದಲೇ ಮಾತಾಡ್ತಿರೋದು ಎಂದು ಸ್ಪಷ್ಟಪಡಿಸಿದ್ದಾರೆ.