April 11, 2026
Saturday, April 11, 2026
spot_img

ರಾಜ್ಯದ ಈ ಜಿಲ್ಲೆಗಳಲ್ಲಿ ಗ್ಯಾಸ್‌ ಸಿಲಿಂಡರ್‌ ಸಿಕ್ತಾನೇ ಇಲ್ಲ, ಇಂದಿನಿಂದಲೇ ಹೊಟೇಲ್ಸ್‌ ಬಂದ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌ ಹಾಗೂ ಇಸ್ರೇಲ್‌ ನಡುವಣ ಯುದ್ಧದ ಬಿಸಿ ನಮ್ಮ ರಾಜ್ಯದ ಹೊಟೇಲ್‌ನ ಅಡುಗೆ ಮನೆ ತಲುಪಿದ್ದು, ಗ್ಯಾಸ್‌ ವ್ಯತ್ಯಯಿಂದ ಎಷ್ಟೋ ಹೊಟೇಲ್‌ಗಳು ಬಾಗಿಲು ಹಾಕಿವೆ.

ರಾಜಧಾನಿ ಬೆಂಗಳೂರಿನ ಕೆಲ ಹೊಟೇಲ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಹಲವು ಹೊಟೇಲ್‌ಗಳಲ್ಲಿ ಜಾಸ್ತಿ ಗ್ಯಾಸ್‌ ಬಳಕೆಯಾಗುವ ಪೂರಿ, ದೋಸೆ, ವಡೆಗಳನ್ನು ಮಾಡದೇ ಒಂದೇ ಬಾರಿ ಮಾಡಿ ಮುಗಿಸುವ ಪಲಾವ್‌, ರೈಸ್‌ ಬಾತ್‌, ಬಿಸಿಬೇಳೆಬಾತ್‌ನ್ನು ಮಾತ್ರ ಇಡುತ್ತಿದ್ದಾರೆ.

ಇನ್ನು ಶಿವಮೊಗ್ಗ, ದಾವಣಗೆರೆ, ಮೈಸೂರು, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು, ಬಹುತೇಕ ಹೊಟೇಲ್‌ಗಳು ಮುಚ್ಚಿವೆ.

ಅಡುಗೆ ಅನಿಲ‌ ಪೊರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಶಿವಮೊಗ್ಗದ ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಇಂದು ಸಭೆ ನಡೆಸಿತು. ಶಿವಮೊಗ್ಗ ಬಾಲರಾಜ್ ಅರಸ್ ರಸ್ತೆಯ ಮಥುರ ಪ್ಯಾರಡೈಸ್​ನಲ್ಲಿ ಹೋಟೆಲ್ ಮಾಲೀಕರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಲಿಂಡರ್ ಸಮಸ್ಯೆಯಿಂದ ಹೋಟೆಲ್ ಬಂದ್ ಮಾಡುವ ಬಗ್ಗೆ ನಿರ್ದೇಶಕರು ತೀರ್ಮಾನಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !