ಹೊಸದಿಗಂತ ವರದಿ ಯಾದಗಿರಿ:
ಮುಂಬರುವ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಂಡಿಸಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಯಾದಗಿರಿಯಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿ, ಸದ್ಯ ಸಿದ್ದರಾಮಯ್ಯ ಅವರೇ ಸಿಎಂ ಇದ್ದಾರಲ್ಲ ಅವರೇ ಮಂಡಿಸಲಿದ್ದಾರೆ. ಸಂಕ್ರಾಂತಿ ಮುಗಿದ ಮೇಲೆ ಅಧಿಕಾರ ಬದಲಾವಣೆ ವಿಚಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಬ್ಬ ಮುಗಿದ ಬಳಿಕ ನೋಡೋಣ ಎಂದರು.
ರಾಹುಲ್ ಗಾಂಧಿ ದೆಹಲಿಗೆ ಬಂದ ಬಳಿಕ ಮತ್ತೊಮ್ಮೆ ಡಿಕೆಶಿ ಬೆಂಬಲಿಗರು ಭೇಟಿ ಮಾಡುವ ಸಂದರ್ಭವಿಲ್ಲ. ಹೈಕಮಾಂಡ್ ಇದೆ, ಯಾರೂ ಡೆಲ್ಲಿಗೆ ಹೋಗೋದಿಲ್ಲ. ಏನೇ ಮಾಡಬೇಕಾದ್ರೂ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದರು.

