March 11, 2026
Wednesday, March 11, 2026
spot_img

1 ಮರ ಕಡಿದರೆ 10 ಸಸಿ ನೆಡಲು ವಿಧಿಸುವ ಶುಲ್ಕಕ್ಕೆ ವಿನಾಯಿತಿ ಇಲ್ಲ: ಸಚಿವ ಈಶ್ವರ ಖಂಡ್ರೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ರಸ್ತೆ ಯೋಜನೆಯಲ್ಲಿ ಕಡಿಯುವ ಒಂದು ಮರದ ಬದಲಿಗೆ 10 ಪಟ್ಟು ಸಸಿ ನೆಡಲು ವಿಧಿಸುವ ಶುಲ್ಕದ ಮೊದಲ ಪ್ರತಿ ಸಸಿಗೆ 411.27 ಆಗಿದ್ದು, ಇದನ್ನು ಉಪಯೋಗಿ ಸಂಸ್ಥೆ ಪಾವತಿಸಬೇಕಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಸದಸ್ಯ ತಮ್ಮಯ್ಯ ಹೆಚ್.ಡಿ. ಅವರು ರಾ.ಹೆ.373 ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಶುಲ್ಕ ವಿನಾಯಿತಿ ನೀಡುವ ಕುರಿತಂತೆ ಪ್ರಸ್ತಾಪಕ್ಕೆ, ವಿಧಾನಸಭೆಯಲ್ಲಿ ಉತ್ತರಿಸಿದ ಸಚಿವರು, ರಸ್ತೆ ಯೋಜನೆಗಳ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ಕಿ.ಮೀ.ಗೆ 9.06 ಲಕ್ಷ ಶುಲ್ಕ ವಿಧಿಸಲಾಗಿರುತ್ತದೆ. ಆದರೆ ಎನ್‌ಹೆಚ್‌ಎಐನ ವಿಸ್ತೃತ ಯೋಜನಾ ವರದಿಯಲ್ಲಿ ಈ 9 ಲಕ್ಷ ಸೇರಿಸಿ, ಗುತ್ತಿಗೆದಾರರ ಕಡೆಯಿಂದಲೇ ಸಸಿ ನೆಡಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.

ರಸ್ತೆಯ ಬದಿಯಲ್ಲಿ ಗುತ್ತಿಗೆದಾರರಿಂದ ಸಸಿ ನೆಡಿಸದಿದ್ದರೆ, ಈಗ ನೀಡಿರುವ ಅನುಮತಿ ಹಿಂಪಡೆಯುತ್ತೇವೆ ಎಂದು ಸದನಕ್ಕೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ವಿಭಾಗಗಳು, ರಾಜ್ಯ ಹೆದ್ದಾರಿ ವಿಭಾಗಗಳು, ರಾಜ್ಯ ಲೋಕೋಪಯೋಗಿ ಇಲಾಖೆ, ಪಿಆರ್‌ಇಡಿ, ಕೆಶಿಪ್, ಕೆಆರ್‌ಡಿಸಿಎಲ್ ಅಥವಾ ಯಾವುದೇ ಇತರ ಪ್ರಾಧಿಕಾರದಿಂದ ಕೈಗೊಳ್ಳಲಾಗುವ ರಸ್ತೆ ಯೋಜನೆಗಳಿಗೆ ಈ ವಿನಾಯಿತಿ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !