ಮೂವತ್ತು ದಾಟಿದ ನಂತರ ಮಹಿಳೆಯರು ತಮ್ಮ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹುಮುಖ್ಯವಾಗಿದೆ. ತಮ್ಮ ಥೈರಾಯಿಡ್, ಶುಗರ್,ಬಿಪಿ ಇನ್ನಿತರ ಬೇಸಿಕ್ ಚೆಕಪ್‌ಗಳನ್ನು ಆಗಾಗ್ಗೆ ಮಾಡಿಸುವುದು ಉತ್ತಮ. ಇದರ ಜತೆಗೆ ಒಮ್ಮೆ ಕಾರ್ಟಿಸಾಲ್ ಪರೀಕ್ಷಿಯನ್ನೂ ಮಾಡಿಸಿಬಿಡಿ. ಇದು ಒತ್ತಡದಿಂದ ಬರುವ ಸಮಸ್ಯೆಯಾಗಿತ್ತು. ಕಾರ್ಟಿಸಾಲ್ ಲೆವೆಲ್ ಹೆಚ್ಚಾಗಿದೆ ಎಂದಾದರೆ ಈ ಲಕ್ಷಣಗಳು ಕಾಣಿಸುತ್ತವೆ..
ದೇಹದಲ್ಲಿ ಹೆಚ್ಚು ಫ್ಯಾಟ್ ಸ್ಟೋರ್ ಆಗುತ್ತದೆ. ಕಾರಣವೇ ಇಲ್ಲದೆ ನೀವು ದಪ್ಪ ಆಗುತ್ತೀರಿ. ಇಳಿಸೋದು ಅಸಾಧ್ಯವಾಗುತ್ತದೆ.
ಎನರ್ಜಿ ಇರೋದಿಲ್ಲ. ಸ್ವಲ್ಪ ಸಮಯ ಎನರ್ಜಿ ಇದೆ ಎಂದು ಅನಿಸಬಹುದು. ಆದರೆ ಸುಸ್ತಾಗುತ್ತೀರಿ. ರಾತ್ರಿ ನಿದ್ದೆಯೂ ಸರಿಯಾಗಿ ಆಗೋದಿಲ್ಲ.
ಒಂದು ವಿಷಯದ ಬಗ್ಗೆ ಕಾನ್ಸಂಟ್ರೇಟ್ ಮಾಡೋಕೆ ಆಗೋದಿಲ್ಲ. ನಿಮ್ಮ ಮೆದುಳಿನಲ್ಲಿ ಸಾವಿರಾರು ವಿಷಯಗಳು ಓಡುತ್ತವೆ. ಎಲ್ಲದಕ್ಕೂ ನೀವು ಅಟೆನ್ಶನ್ ಕೊಡ್ತೀರಿ
ಆಗಾಗ ಶೀತ ಜ್ವರ ಕೆಮ್ಮು ಅದು ಇದು ಎಂದು ಅನಾರೋಗ್ಯ ಕಾಡುತ್ತದೆ. ಇಮ್ಯುನಿಟಿ ಕಡಿಮೆಯಾಗುತ್ತದೆ.
ಏನು ಮಾಡಬಹುದು?
ಸರಿಯಾದ ನಿದ್ದೆ
ನಿತ್ಯವೂ ವ್ಯಾಯಾಮ
ಒತ್ತಡರಹಿತ ಜೀವನ ನಿಭಾಯಿಸಲು ಯತ್ನಿಸಿ
ಯೋಗ & ಮೆಡಿಟೇಷನ್
ನಕ್ಕು ನಲಿಯಿರಿ
ಅತಿಯಾದ ಸ್ಟ್ರೆಸ್‌ನ ಕೆಲಸ ಇದ್ದರೆ ಬಿಟ್ಟುಬಿಡಿ
ಟ್ರಾವೆಲ್ ಮಾಡಿ
ತೂಕ ಇಳಿಸಿಕೊಳ್ಳಿ
CORTISOL | ಹೆಣ್ಣುಮಕ್ಕಳನ್ನು ಕಾಡುವ ʼಒತ್ತಡʼ, ಕಾರ್ಟಿಸಾಲ್ ಹೆಚ್ಚಿದ್ರೆ ಈ ಲಕ್ಷಣಗಳು ಕಾಣುತ್ತವೆ

