ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನಾಯಂಡಹಳ್ಳಿ ರೈಲ್ವೆ ನಿಲ್ದಾಣದಲ್ಲಿ ನಾಲ್ಕು ರೈಲುಗಳನ್ನು ನಿಲುಗಡೆಗೊಳಿಸಲು ಅನುಮತಿ ನೀಡಿರುವುದಾಗಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
೧) ರೈಲು ಸಂಖ್ಯೆ : 16215/16216 ; ಮೈಸೂರು – ಕೆ.ಎಸ್. ಆರ್. ಸಿಟಿ
೨) ರೈಲು ಸಂಖ್ಯೆ : 17307 /17308 – ಮೈಸೂರು –ಬಾಗಲಕೋಟೆ –ಬಸವ ಎಕ್ಸಪ್ರೆಸ್
೩) ರೈಲು ಸಂಖ್ಯೆ 16235/16236 : ಟುಟಿಕೋರಿನ್ – ಮೈಸೂರು ಎಕ್ಸಪ್ರೆಸ್
೪) ರೈಲು ಸಂಖ್ಯೆ 16535/16536 ; ಮೈಸೂರು – ಪಂಡಾರಪುರ ಗೊಲ್ಗುಂಬಜ್ ಎಕ್ಸಪ್ರೆಸ್ ರೈಲುಗಳನ್ನು ನಾಯಂಡನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸುವಂತೆ ಸಾರ್ವಜನಿಕರ ಒತ್ತಡವಿತ್ತು. ಹಲವು ಭಾರಿ ಸಾರ್ವಜನಿಕರ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಯನ್ನು ಪರಿಗಣಿಸಲು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೈಲು ನಿಲುಗಡೆಗೆ ಕ್ರಮ ಜರುಗಿಸಲಾಗಿತ್ತು. ರೈಲ್ವೆ ಇಲಾಖೆ ಪ್ರಯಾಣಿಕರ ಹಿತದೃಷ್ಟಿಯಿಂದ ನಾಲ್ಕು ರೈಲುಗಳಿಗೆ ನಾಯಂಡನಹಳ್ಳಿ ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಆದೇಶ ನೀಡಿದೆ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ಸೋಮಣ್ಣ ತಿಳಿಸಿದ್ದಾರೆ.
ಈ ರೈಲುಗಳ ನಿಲುಗಡೆಯಿಂದ ಬೆಂಗಳೂರಿನಿಂದ ಮೈಸೂರು, ಬಾಗಲಕೋಟೆ, ತಮಿಳುನಾಡು, ಹುಬ್ಬಳ್ಳಿ-ಧಾರವಾಡ, ಪಂಡರಾಪುರ ಹಾಗೂ ವಿಶೇಷವಾಗಿ ಬೆಂಗಳೂರು ಮತ್ತು ಮೈಸೂರಿನ ನಡುವೆ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಬಹಳ ಅನುಕೂಲಕರವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ರೈಲು ಸೇವೆಗಳ ಸದುಪಯೋಗ ಪಡಿಸಿಕೊಳ್ಳವುಂತೆ ಮನವಿ ಮಾಡಿದ್ದಾರೆ. ಜೊತೆಗೆ ರೈಲು ಪ್ರಯಾಣಿಕರ ಹಿತಾಶಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಹತ್ತಾರು ಅಭಿವೃದ್ದಿಪರ ಕೆಲಸ ಮಾಡುತ್ತಿದ್ದು, ನಾಯಂಡನಹಳ್ಳಿ ರೈಲ್ವೆ ನಿಲ್ದಾಣಗಳಲ್ಲಿ 4 ರೈಲುಗಳ ನಿಲುಗಡೆಗೆ ಅನುಮೋದನೆ ನೀಡಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರದ ರೈಲು ಸಚಿವರಾದ ಅಶ್ವೀನಿ ವೈಷ್ಣವ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

