Friday, November 28, 2025

ಬೆಂಗಳೂರಿನಲ್ಲಿ 11 ದಿನಗಳ ಕಾಲ ಈ ಪ್ರಮುಖ ರಸ್ತೆಗಳು ಬಂದ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಂತಹ ಮಹಾನಗರಿಯ ಸಂಚಾರದಲ್ಲಿ ಕೊಂಚ ಏರುಪೇರಾದ್ರು ಸಾಕು ಟ್ರಾಫಿಕ್ ಸಮಸ್ಯೆ ದೊಡ್ಡ ತಲೆ ನೋವಾಗುತ್ತೆ. ಗಂಟೆ ಗಟ್ಟಲೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತೆ. ಇದೀಗ ನಗರದ ಕಬ್ಬನ್ ಪಾರ್ಕ್​ನಲ್ಲಿ ಇಂದಿನಿಂದ ಫ್ಲವರ್​ ಶೋ ಹಿನ್ನೆಲೆ ಕೆಲ ಮಾರ್ಗಗಳಲ್ಲಿ ಬದಲಾವಣೆ ತರಲಾಗಿದೆ. 11 ದಿನಗಳ ಕಾಲ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂದ ಹೇರಲಾಗಿದೆ.

ಇಂದಿನಿಂದ ಫ್ಲವರ್ ಶೋ ಹಿನ್ನೆಲೆ ಕಬ್ಬನ್ ಪಾರ್ಕ್‌ ಸುತ್ತ ಮುತ್ತ ಸಂಚಾರದಲ್ಲಿ ಬದಲಾವಣೆ ತರಲಾಗಿದೆ. ನವೆಂಬರ್​ 27 ರಿಂದ 11 ದಿನಗಳ ಕಾಲ ಫ್ಲವರ್ ಶೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,  ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. 11 ದಿನಗಳ ಕಾಲ ಫ್ಲವರ್ ಶೋ  ನಡೆಯುವ ಹಿನ್ನೆಲೆ ಬೆಂಗಳೂರಿನ ಕಬ್ಬನ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಹೆಚ್ಚಾಗುವ ಸಾಧ್ಯತೆ ಇದೆ. ರಿಚ್‌ ಮಂಡ್ ಸರ್ಕಲ್ , ಶಿವಾಜಿನಗರ, ಕೆ ಆರ್ ಸರ್ಕಲ್, ಕಾರ್ಪೊರೇಷನ್ ಕಡೆಗೆ ತೆರಳುವ ವಾಹನ ಸವಾರರಿಗೆ ಸಂಚಾರ ಮಾರ್ಗ ಬದಲಿಸುವಂತೆ ಸೂಚನೆ ನೀಡಲಾಗಿದೆ.

ಹತ್ತು ವರ್ಷಗಳ ಬಳಿಕ ಕಬ್ಬನ್ ಪಾರ್ಕ್ ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ‌ ಮಕ್ಕಳ ದಿನಾಚರಣೆ ಅಂಗವಾಗಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ನವೆಂಬರ್​ 27 ರಿಂದ ಡಿಸೆಂಬರ್​​ 7ರ ವರೆಗೆ ಪುಷ್ಪ ಪ್ರದರ್ಶನ ಜೊತೆಗೆ ಕಲಾ ಹಾಗೂ ಸಂಸ್ಕೃತಿ ಕಾರ್ಯಕ್ರಮ ನಡೆಯಲಿದೆ.

error: Content is protected !!