ರಾತ್ರಿ ಊಟ ಮಾಡಿದ ನಂತರ ಈ ತಪ್ಪುಗಳನ್ನು ಮಾಡಬೇಡಿ. ಇದು ನಿಮ್ಮ ದೇಹದ ತೂಕವನ್ನು ಹೆಚ್ಚಾಗುವಂತೆ ಮಾಡುತ್ತದೆ. ಯಾವ ತಪ್ಪು ನೋಡಿ..
ನೀವು ರಾತ್ರಿ ಊಟದ ನಂತರ ಹಾಗೆಯೇ ಮಲಗುವ ಅಭ್ಯಾಸವಿದ್ದರೆ ಅದು ನಿಮಗೆ ತೂಕ ಇಳಿಸುವಲ್ಲಿ ಸಹಾಯ ಮಾಡುವುದಿಲ್ಲ. ಊಟವಾದ ನಂತರ ಸುಮಾರು 30 ನಿಮಿಷಗಳ ಕಾಲ ಓಡಾಡುವುದು ಮುಖ್ಯವಾಗುತ್ತದೆ. ಊಟವಾದ ತಕ್ಷಣ ಮಲಗುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ದೇಹದ ತೂಕ ಇಳಿಸಲು ಸಾಧ್ಯವಾಗುವುದಿಲ್ಲ.
ನೀವು ರಾತ್ರಿ ಊಟದ ನಂತರ ಚಾಕೊಲೇಟ್, ಬಿಸ್ಕೆಟ್ ಮತ್ತು ಇತರ ಜಂಕ್ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸವನ್ನು ಹೊಂದಿದ್ದರೆ, ಅದು ಒಳ್ಳೆಯದಲ್ಲ. ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಅನಗತ್ಯವಾಗಿ ತೂಕ ಹೆಚ್ಚಳವಾಗುತ್ತದೆ.
ಯಾವುದೇ ಕಾರಣಕ್ಕೂ ಊಟವಾದ ತಕ್ಷಣ ನೀರನ್ನು ಸೇವನೆ ಮಾಡುವುದು ಆರೋಗ್ಯಕರ ಅಭ್ಯಾಸವಲ್ಲ. ಊಟವಾಗಿ ಸುಮಾರು ಅರ್ಧ ಗಂಟೆಗಳ ನಂತರ ನೀರು ಕುಡಿಯುವುದು ಉತ್ತಮ.
ರಾತ್ರಿಯಿಡೀ ಉತ್ತಮ ನಿದ್ದೆ ಮಾಡದಿರುವುದು ಕೂಡ ತೂಕ ಹೆಚ್ಚಳ ಹಾಗೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಊಟಕ್ಕೆ ಹೆಚ್ಚು ಮಸಾಲೆ ಪದಾರ್ಥ, ಕಾರ್ಬೋಹೈಡ್ರೇಟ್ಸ್ ತಿನ್ನುವುದು ಉತ್ತಮವಲ್ಲ. ಲೈಟ್ ಆದ ಆಹಾರ ಅಥವಾ ಸಲಾಡ್ ತಿನ್ನುವುದು ಉತ್ತಮವಾಗಿದೆ.
HEALTH | ರಾತ್ರಿ ಮಾಡುವ ಈ ತಪ್ಪುಗಳಿಂದ ದೇಹದ ತೂಕ ಹೆಚ್ಚಾಗುತ್ತದಂತೆ!
