ಹೊಸದಿಗಂತ ವರದಿ ಬೆಳಗಾವಿ:
ಇದೇ ತಿಂಗಳು 19 ರಂದು ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ನಂದಗಂಡದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಅದರ ಪ್ರಯುಕ್ತ ಶುಕ್ರವಾರ ಪೂರ್ವಭಾವಿಯಾಗಿ ನಂದಗಡಕ್ಕೆ ನಾನು ಭೇಟಿ ನೀಡುತ್ತಿದ್ದೇನೆ. ಬಳಿಕ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತ ಸಚಿವ ಶಿವರಾಜ ತಂಗಡಗಿ ಹೇಳಿದರು.
ಶುಕ್ರವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ, ನ್ಯಾಷನಲ್ ಹೆರಾಡ್ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಮೂರು ಭಾಗವಾಗಿದೆ, ಬಿಜೆಪಿಯವರು ದ್ವೇಷ ರಾಜ್ಯಕಾರಣ ಬಿಟ್ಟು ಬೇರೆ ಏನು ಮಾಡಿದ್ದಾರೆ. ದೇಶದಲ್ಲಿ ಏನು ಕೊಡುಗೆ ಕೊಟ್ಟಿದ್ದಾರೆ. ಮಹಾತ್ಮ ಗಾಂಧಿ ಅವರ ಹೆಸರನ್ನು ಅಳಿಸಿ ರಾಮಜೀ ಎಂದು ಹೆಸರಿಟ್ಟಿದ್ದಾರೆಂದು ಕೇಂದ್ರ ಹಾಗೂ ರಾಜ್ಯ ಬಿಜಿಪಿಯ ವಿರುದ್ದ ಅಸಮಾಧಾನ ಹೊರ ಹಾಕಿದರು.
ಬಿಜಿಪಿಯವರು ಪ್ರತಿಯೊಂದು ಗ್ರಾಮಪಂಚಾಯತಿಯಲ್ಲಿಯೂ ಅನ್ಯಾಯ ಮಾಡುವುದಕ್ಕೆ ಹೊರಟಿದ್ದಾರೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಕೇಂದ್ರದ ಬಿಜೆಪಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಸಿಎಂ ಬದಲಾವಣೆ ವಿಚಾರ; ಅದರ ಬಗ್ಗೆ ಚರ್ಚೆ ಮಾಡುವುದು ಅವಶ್ಯಕತೆ ಇಲ್ಲ,ಹೈ ಕಮಾಂಡ್ ರಾಜ್ಯದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಅದಕ್ಕೆ ಈ ರೀತಿ ಆರೋಪ ಮಾಡಿಕೊಂಡು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ: FOOD | ದಿಢೀರ್ ಒನ್ ಪಾಟ್ ರಸಂ ರೈಸ್ ಟ್ರೈ ಮಾಡಿ, ಕೆಲಸ ಸುಲಭ
ಬಿಜೆಪಿ ಸೃಷ್ಟಿ ಕರ್ತರು ದೇವರು ಹಾಗೂ ಆರೋಪ ಮಾಡುವುದು ಬಿಟ್ಟು ಬೇರೆ ಏನು ಕೆಲಸ ಇಲ್ಲ ಅದಕ್ಕೆ ಇವೆಲ್ಲ ಕೆಲಸ ಮಾಡುತ್ತಿದ್ದಾರೆ ಎಂದರು. ಬಳ್ಳಾರಿ, ಹುಬ್ಬಳ್ಳಿ ಈ ವಿಚಾರ ಬಿಟ್ಟು ಬೇರೆ ಏನು ಇಲ್ಲ ಬಿಜೆಪಿಯವರ ಬಳಿ ಅಧಿಕಾರ ಇದ್ದಾಗ ಬಳ್ಳಾರಿಗೆ ಜನ ಹೋಗುವುದಕ್ಕೆ ಬಯ ಪಡುತ್ತಿದ್ದರು. ಇದೀಗ ಏನ್ ಆಗುತ್ತಿದೆ, ರೆಡ್ಡಿ ಅವರು ಅಭಿವೃದ್ಧಿ ಕೆಲಸ ಮಾಡಲಿ ಬೇರೆ ವಿಚಾರವನ್ನು ಬಿಟ್ಟು, ಬಿಜೆಪಿ ಕೇಂದ್ರ ಹಾಗೂ ರಾಜ್ಯದ ನಾಯಕರ ವಿರುದ್ದ ಗಂಭೀರವಾಗಿ ಆರೋಪಿಸಿದ್ದಾರೆ.
ಬೆಳಗಾವಿ ಕನ್ನಡ ಭವನ ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದಾರೆ. ಅದರ ಬಗ್ಗೆ ವಿಚಾರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು 150 ಹಾಸ್ಟೆಲ್ ಗಳನ್ನು ಕೊಡುವ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ ದಿ. ದೇವರಾಜ ಅರಸು ದಾಖಲೆ ಮೀರಿ ಮುಂದೆ ಸಾಗುತಿದ್ದಾರೆ. ನಾನು ದೇವರಾಜ ಅರಸರನ್ನು ನೋಡಿಲ್ಲ, ಆದರೆ ಸಿದ್ದರಾಮಯ್ಯ ಅವರು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ರಾಜ್ಯದಲ್ಲಿ ಜನಪರ ಆಡಳಿತ ಮಾಡಿದ್ದಾರೆ, ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು.
ಹಿಂದಿನ ಬಿಜೆಪಿ ಸರಕಾರ ಇದ್ದಾಗ ಎನ್ ಮಾಡಿದ್ದಾರೆ, ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಸಂಗೊಳ್ಳಿ ರಾಯಣ್ಣ ನಂದಗಡದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೂಡಲೇ ಮಾಡಲಾಗುವುದು. ಬೈಲಹೊಂಗಲದ ಮರಕುಂಬಿಯಲ್ಲಿ ಬಾಯ್ಲರ್ ಬ್ಲಾಸ್ಟ್ ಪ್ರಕರಣಕ್ಕೆ 8 ಜನ ಸಾವು ಆಗಿದೆ ಅದರ ಬಗ್ಗೆ ಸರಕಾರ ಪರಿಶೀಲನೆ ಮಾಡಿ ಪರಿಹಾರ ನೀಡಲಾಗುದು ಎಂದರು.

