ಹೊಸದಿಗಂತ ಡಿಜಿಟಲ್ ಡೆಸ್ಕ್:
ಡ್ರಾಪ್ ಕೇಳಿದ್ದ ಮಹಿಳೆಯ ಮೂರು ಲಕ್ಷ ಮೌಲ್ಯದ ಚಿನ್ನದ ಸರವನ್ನು ಖದೀಮ ಎಗರಿಸಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿರ್ಲಾಪುರ ಕ್ರಾಸ್ ಬಳಿ ನಡೆದಿದೆ.
ರತ್ನಾ ಬಣಕಾರ್ ಸರ ಕಳೆದುಕೊಂಡ ಮಹಿಳೆ. 29 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಖದೀಮ ಪರಾರಿಯಾಗಿದ್ದಾನೆ. ಕಾಗಿನೆಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರತ್ನಾ ಬಣಕಾರ್ ಅವರು ಬೈಕ್ಗೆ ಕೈ ಮಾಡಿ ಕುಮ್ಮೂರು ಕ್ರಾಸ್ನಿಂದ ಗುಮ್ಮನಹಳ್ಳಿವರೆಗೆ ಡ್ರಾಪ್ ಕೇಳಿದ್ದಾರೆ.
ಬೈಕ್ ಸವಾರ ಹತ್ತಿಸಿಕೊಂಡಿದ್ದಾನೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿಪಲಾಪುರ ಕ್ರಾಸ್ ಬಳಿ ನಮ್ಮ ಸಂಬಂಧಿಕರು ಬರುತ್ತಿದ್ದಾನೆ ಅಂತಾ ರತ್ನಾ ಅವರನ್ನು ಇಳಿಸಿದ್ದಾನೆ. ಈ ವೇಳೆ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಖದೀಮ ಪರಾರಿ ಆಗಿದ್ದಾನೆ.

