ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ನೇಹಿತರ ಜೊತೆ ರೋಡ್ ಟ್ರಿಪ್ ಅನ್ನೋದು ಜೀವನದಲ್ಲಿ ಮರೆಯಲಾಗದ ಅನುಭವ. ಆ ಪ್ರಯಾಣವನ್ನು ಇನ್ನೂ ಮಧುರಗೊಳಿಸುವುದೇ ಸರಿಯಾದ ಕಾರು. ಸ್ಪೇಸ್, ಕಂಫರ್ಟ್, ಮೈಲೇಜ್ ಮತ್ತು ಸ್ಮೂತ್ ಡ್ರೈವಿಂಗ್ – ಇವೆಲ್ಲಾ ಇದ್ದರೆ ಟ್ರಿಪ್ ಇನ್ನೂ ಜೋಶ್ ಆಗಿರುತ್ತೆ. ನಿಮ್ಮ ಗ್ಯಾಂಗ್ ಜೊತೆ ಸುಖಕರವಾಗಿ, ಸ್ಟೈಲಿಷ್ ಆಗಿ ಪ್ರಯಾಣಿಸಲು ಸೂಕ್ತವಾದ 5 ಕಾರುಗಳಿವು.
Toyota Innova Crysta – ಕಂಫರ್ಟ್‌ಗೆ ಮೊದಲ ಆಯ್ಕೆ
ಲಾಂಗ್ ಟ್ರಿಪ್‌ಗಳಿಗೆ ಇನೋವಾ ಕ್ರಿಸ್ಟಾ ಅಂದ್ರೆ ಸುರಕ್ಷಿತ ಮತ್ತು ಆರಾಮದಾಯಕ ಆಯ್ಕೆ. ದೊಡ್ಡ ಸೀಟಿಂಗ್ ಸ್ಪೇಸ್ ಇರುವುದರಿಂದ 6-7 ಜನ ಸುಲಭವಾಗಿ ಕೂತು ಪ್ರಯಾಣಿಸಬಹುದು. ದೀರ್ಘ ಪ್ರಯಾಣದಲ್ಲೂ ದಣಿವು ಕಡಿಮೆ.

Mahindra XUV700 – ಪವರ್ ಮತ್ತು ಸ್ಟೈಲ್ ಕಾಂಬಿನೇಶನ್
ಈ ಕಾರು ಶಕ್ತಿಯುತ ಎಂಜಿನ್ ಹಾಗೂ ಆಧುನಿಕ ಫೀಚರ್‌ಗಳಿಂದ ಪ್ರಸಿದ್ಧ. ಹೈವೇ ಡ್ರೈವ್‌ನಲ್ಲಿ ಸ್ಮೂತ್ ಅನುಭವ ಕೊಡುತ್ತದೆ. ಸ್ನೇಹಿತರ ಜೊತೆ ಟ್ರಿಪ್‌ಗೆ ಸ್ಟೈಲಿಷ್ ಲುಕ್ ಕೂಡ ಸಿಗುತ್ತದೆ.

Kia Carens – ಫ್ಯಾಮಿಲಿ + ಫ್ರೆಂಡ್ಸ್ ಟ್ರಿಪ್‌ಗೆ ಸೂಟ್
ಸ್ಪೇಸ್, ಕಂಫರ್ಟ್ ಮತ್ತು ಮೈಲೇಜ್ ಮಿಶ್ರಣ ಈ ಕಾರಿನ ವಿಶೇಷತೆ. ಬ್ಯಾಗ್‌ಗಳಿಗೆ ಸಾಕಷ್ಟು ಜಾಗ ಇರುವುದರಿಂದ ಟ್ರಾವೆಲ್‌ಗಾಗಿ ತುಂಬಾ ಉಪಯುಕ್ತ.

Tata Nexon – ಸುರಕ್ಷತೆ ಮುಖ್ಯ ಅನ್ನೋವರಿಗೆ
ಸೇಫ್ಟಿ ರೇಟಿಂಗ್ ಉತ್ತಮವಾಗಿರುವ ನೆಕ್ಸಾನ್, ಚಿಕ್ಕ ಗ್ಯಾಂಗ್ ಟ್ರಿಪ್‌ಗೆ ಸೂಕ್ತ. ಸಿಟಿ ಹಾಗೂ ಹೈವೇ ಎರಡಕ್ಕೂ ಪರ್ಫೆಕ್ಟ್.

Maruti Suzuki Ertiga – ಬಜೆಟ್ ಫ್ರೆಂಡ್ಲಿ ಆಯ್ಕೆ
ಕಡಿಮೆ ವೆಚ್ಚದಲ್ಲಿ ಹೆಚ್ಚು ಸ್ಪೇಸ್ ಬೇಕಾದರೆ ಎರ್ಟಿಗಾ ಒಳ್ಳೆಯ ಆಯ್ಕೆ. ಮೈಲೇಜ್ ಉತ್ತಮವಾಗಿದ್ದು, ದೀರ್ಘ ಪ್ರಯಾಣಕ್ಕೂ ಬೆಸ್ಟ್.



