ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಎದ್ದು ತಿಂಡಿ ಮಾಡುವುದೇ ಕಷ್ಟಕರ ಕೆಲಸ. ಪ್ರತಿದಿನವೂ ಒಂದೇ ರೀತಿಯ ಅವಲಕ್ಕಿ, ಉಪ್ಪಿಟ್ಟು, ದೋಸೆ, ಇಡ್ಲಿ ತಿಂದು ಜನರು ಬೇಸತ್ತು ಹೋಗಿದ್ದಾರೆ. ಬೆಳಗಿನ ವೇಳೆಯಲ್ಲಿ ಬೇರೆ ಯಾವುದಾದರೂ ಹೊಸ ತಿಂಡಿಯನ್ನು ಮಾಡಬೇಕೆಂದರೆ ಸಮಯ ಹೆಚ್ಚಾಗುತ್ತದೆ. ಈ ಪರಿಸ್ಥಿತಿಯಲ್ಲಿ ಕೇವಲ 10 ರಿಂದ 15 ನಿಮಿಷಗಳಲ್ಲಿ ತಯಾರಿಸಬಹುದು ಸೌತೆಕಾಯಿ ದೋಸೆ.
ಬೇಕಾಗುವ ಸಾಮಗ್ರಿಗಳು
ಸೌತೆಕಾಯಿ – 1 ಮಧ್ಯಮ ಗಾತ್ರದ
ಗೋಧಿ ಹಿಟ್ಟು – ½ ಕಪ್
ಅಕ್ಕಿ ಹಿಟ್ಟು – ½ ಕಪ್
ಕಡಲೆ ಹಿಟ್ಟು – 2 ಟೇಬಲ್ ಸ್ಪೂನ್
ಮೊಸರು – ¼ ಕಪ್
ಖಾರದ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನ ತುರಿ – 2 ಟೇಬಲ್ ಸ್ಪೂನ್
ನೀರು – ಅಗತ್ಯವಿರುವಷ್ಟು
ಎಣ್ಣೆ/ತುಪ್ಪ – ಸ್ವಲ್ಪ
ಮಾಡುವ ವಿಧಾನ
ಮೊದಲು ಸೌತೆಕಾಯಿಯನ್ನು ತುರಿದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಸೇರಿಸಿ. ಬಳಿಕ ಮೊಸರು, ಖಾರದ ಪುಡಿ, ಉಪ್ಪು ಹಾಗೂ ತೆಂಗಿನ ತುರಿಯನ್ನು ಹಾಕಿ. ಅಗತ್ಯವಿರುವಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ಚೆನ್ನಾಗಿ ಕಲಸಿಕೊಳ್ಳಿ.
ಈಗ ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಚ್ಚಿ, ಸಿದ್ಧವಾದ ಹಿಟ್ಟನ್ನು ತವಾ ಮೇಲೆಹರಡಿ ಎರಡು ಕಡೆ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ.