Tuesday, October 14, 2025

ಇದು actually ಚನ್ನಾಗಿರೋದು! ಗೆಲುವಿನ ಜೊತೆ ಭಾರತ ಆಟಗಾರರಿಂದ ಮೌನ ಪ್ರತಿಭಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸುಲಭ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 127 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ 15.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆದರೆ ಈ ಜಯದಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ನೆನಪನ್ನು ಹಂಚಿಕೊಂಡ ಟೀಂ ಇಂಡಿಯಾ ಆಟಗಾರರ ನಡೆ ಗಮನ ಸೆಳೆದಿತು.

ಕೈಕುಲುಕಲು ನಿರಾಕರಿಸಿದ ಭಾರತೀಯ ಆಟಗಾರರು
ಪಂದ್ಯ ಶುರುವಾಗುವ ಮುನ್ನವೇ ಸೂರ್ಯಕುಮಾರ್ ಯಾದವ್ ಪಾಕ್ ನಾಯಕನೊಂದಿಗೆ ಕೈಕುಲುಕಲು ನಿರಾಕರಿಸಿದ್ದರು. ಪಂದ್ಯ ಮುಗಿದ ನಂತರವೂ ಟೀಂ ಇಂಡಿಯಾ ಆಟಗಾರರು ಪಾಕ್ ಆಟಗಾರರೊಂದಿಗೆ ಸಂಭಾಷಣೆ ನಡೆಸದೇ ನೇರವಾಗಿ ಡ್ರೆಸ್ಸಿಂಗ್ ರೂಂ ಕಡೆ ಮುಖ ಮಾಡಿದರು. ಪಾಕ್ ಆಟಗಾರರು ಮೈದಾನದಲ್ಲೇ ಅಭಿನಂದನೆ ನೀಡಲು ಕಾಯುತ್ತಿದ್ದರೂ, ಭಾರತೀಯ ಆಟಗಾರರು ಅವರೊಂದಿಗೆ ಕೈಕುಲುಕಲು ಬರಲೇ ಇಲ್ಲ.

ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡುವ ಸಮಯದಲ್ಲಿ ತಾಂತ್ರಿಕ ತೊಂದರೆಯಿಂದ ಪಾಕಿಸ್ತಾನದ ರಾಷ್ಟ್ರಗೀತೆ ಬದಲು ಕೆಲ ಕ್ಷಣಗಳ ಕಾಲ “ಜಿಲೇಬಿ ಬೇಬಿ” ಹಾಡು ಕೇಳಿಸಿತು. ಬಳಿಕ ಆಯೋಜಕರು ತಪ್ಪನ್ನು ಸರಿಪಡಿಸಿದರೂ, ಈ ಘಟನೆ ಪಾಕ್ ಆಟಗಾರರಿಗೆ ಮುಜುಗರ ತಂದಿತು. ವೀಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಬಹುಮಾನ ವಿತರಣೆ ವೇಳೆ ಪಾಕ್ ಜೆರ್ಸಿ ತೊಟ್ಟಿದ್ದ ಮಹಿಳೆಗೂ ಟೀಮ್‌ ಇಂಡಿಯಾ ಆಟಗಾರರು ಕೈಕುಲುಕಲು ಹೋಗಿರಲಿಲ್ಲ. ಸಂದರ್ಶನದ ಬಳಿಕ ಪಹಲ್ಗಾಮ್ ದಾಳಿಯಲ್ಲಿ ಮಡಿದವರ ಸಂತ್ರಸ್ತ ಕುಟುಂಬಗಳ ಜೊತೆ ನಾವಿದ್ದೀವಿ. ಈ ಗೆಲುವು ಶೌರ್ಯ ಪ್ರದರ್ಶಿಸಿದ ಸೇನೆಗೆ ಅರ್ಪಿಸ್ತೇನೆ ಅಂತಿದ್ದಂತೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಹರ್ಷೋಧ್ಘಾರ ವ್ಯಕ್ತವಾಯಿತು.

error: Content is protected !!