Monday, September 22, 2025

ಇದು ಪೈಪೋಟಿಯೇ ಅಲ್ಲ, ಭಾರತಕ್ಕೆ ಪಾಕಿಸ್ತಾನ ಸಾಟಿಯೇ ಇಲ್ಲ: ಸೂರ್ಯಕುಮಾರ್ ಯಾದವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಆರ್ಭಟದ ಆರಂಭದಿಂದಲೇ ಅಂಕಿ-ಅಂಶಗಳಲ್ಲಿ ಮುನ್ನಡೆಯನ್ನು ಸಾಧಿಸಿ, 18.5 ಓವರ್‌ಗಳಲ್ಲಿ ಗುರಿ ಮುಟ್ಟಿತು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಭಾರತ-ಪಾಕಿಸ್ತಾನ ಪಂದ್ಯಗಳನ್ನು “ಪೈಪೋಟಿ” ಎಂದು ಕರೆಯುವ ಅಭ್ಯಾಸವನ್ನು ನಿಲ್ಲಿಸಲು ಮನವಿ ಮಾಡಿದರು. “ಪೈಪೋಟಿ ಅಂದರೆ ಎರಡೂ ತಂಡಗಳು ಸಮಾನ ಗೆಲುವು ಸಾಧಿಸಬೇಕು. ಆದರೆ ವಾಸ್ತವದಲ್ಲಿ ನಾವು ಪಾಕಿಸ್ತಾನ ವಿರುದ್ಧ ಏಕಪಕ್ಷೀಯವಾಗಿ ಗೆಲ್ಲುತ್ತಿದ್ದೇವೆ. 13-0 ಅಥವಾ 10-1 ಅಂತರ ನಮ್ಮ ಪರವಾಗಿರುವಾಗ, ಇದನ್ನು ಪೈಪೋಟಿ ಎಂದು ಕರೆಯಲು ಸಾಧ್ಯವಿಲ್ಲ, ಭಾರತಕ್ಕೆ ಪಾಕಿಸ್ತಾನ್ ಸಾಟಿಯೇ ಅಲ್ಲ.” ಎಂದು ಸೂರ್ಯಕುಮಾರ್ ಯಾದವ್ ಸ್ಪಷ್ಟಪಡಿಸಿದರು.

ಈ ಹೇಳಿಕೆಯು ಈಗಾಗಲೇ ಸೋಲಿನಿಂದ ನಿರಾಶೆಯಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಮತ್ತಷ್ಟು ಅಪಮಾನ ತಂದಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ತಂಡವನ್ನು ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.

ಇದನ್ನೂ ಓದಿ