Sunday, October 19, 2025

ಏಷ್ಯಾ ಕಪ್‌ ಇತಿಹಾಸದಲ್ಲಿ ಇದೇ ಮೊದಲು ಹೀಗಾಗ್ತಿರೋದು! ಸೂಪರ್‌ ಸಂಡೇ ರಣರೋಚಕ ಕದನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ಣಾಯಕ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ 11 ರನ್‌ಗಳ ಸೋಲುಣಿಸಿದ ಪಾಕಿಸ್ತಾನ ತಂಡ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಇದೇ ಮೊದಲಬಾರಿಗೆ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

1984ರಲ್ಲಿ ಏಷ್ಯಾ ಕಪ್ ಪ್ರಾರಂಭವಾದ ಬಳಿಕ ಈವರೆಗೆ ಒಟ್ಟು 16 ಬಾರಿ ಉಭಯ ತಂಡಗಳ ನಡುವೆ ಪಂದ್ಯಾವಳಿ ಜರುಗಿದೆ. ಆದ್ರೆ ಈವರೆಗೂ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ಫೈನಲ್ ತಲುಪಿದ್ದಿಲ್ಲ. ಇದೀಗ ಭಾನುವಾರದಂದು ನಡೆಯಲಿರುವ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಲಿದೆ.

ಬಾಂಗ್ಲಾದೇಶ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಹಿನ್ ಶಾ ಅಫ್ರಿದಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಕೂಡ ಪಾತ್ರರಾದರು.

error: Content is protected !!