January18, 2026
Sunday, January 18, 2026
spot_img

ನಾನು ಭಾರತ-ರಷ್ಯಾವನ್ನು ಕಳೆದುಕೊಂಡೆ: ಬೇಸರದಿಂದಲೇ ಟ್ವೀಟ್‌ ಮಾಡಿದ ಟ್ರಂಪ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಅಮೆರಿಕ ಬಿರುಕು ಮೂಡಿದ್ದು, ಇತ್ತ ಭಾರತ ಚೀನಾ ಹಾಗೂ ರಷ್ಯಾ ಒಗ್ಗಟ್ಟಾಗಿರುವುದನ್ನು ಕಂಡು ಟ್ರಂಪ್‌ ಗೆ ಸಹಿಸಲಾಗುತ್ತಿಲ್ಲ. ಇದೀಗ ಸ್ವತಃ ಟ್ರಂಪ್‌ ಅವರೇ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಟಿ 20 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

‘ಚೀನಾದ ಮೇಲಿನ ಹಗೆತನಕ್ಕೋಸ್ಕರ ಭಾರತ ಹಾಗೂ ರಷ್ಯಾವನ್ನು ಕಳೆದುಕೊಂಡೆ’ ಎಂದು ಟ್ರಂಪ್‌ ಬರೆದಿದ್ದಾರೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ ಎಂದು ಅವರು ಹಾರೈಸಿದ್ದಾರೆ.

ಈ ವಾರದ ಆರಂಭದಲ್ಲಿ, ಮೋದಿ ಮತ್ತು ಪುಟಿನ್ ಸೇರಿದಂತೆ ವಿಶ್ವ ನಾಯಕರು ಚೀನಾದ ಟಿಯಾಂಜಿನ್‌ನಲ್ಲಿ SCO ಶೃಂಗಸಭೆಗಾಗಿ ಒಟ್ಟುಗೂಡಿದರು. ಈ ಶೃಂಗಸಭೆಯಲ್ಲಿ ನಾಯಕರು ಅಮೆರಿಕದ ಸುಂಕದ ಕುರಿತು ಮಾತುಕತೆ ನಡೆಸಿದ್ದರು. ಆ ಬಳಿಕ ಟ್ರಂಪ್ ಅವರಿಂದ ಈ ಹೇಳಿಕೆ ಬಂದಿದೆ.

‘ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕರಾಳ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ! ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್,” ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಅದರೊಂದಿಗೆ ಟಿಯಾಂಜಿನ್ ಸಭೆಯಲ್ಲಿ ಪುಟಿನ್ ಮತ್ತು ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಟ್ರಂಪ್‌ ಭಾರತದ ಮೇಲೆ ವಿಧಿಸಿದ ಶೇ.50 ರಷ್ಟು ಸುಂಕದ ನಂತರ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳು ಹಳಸಿವೆ.

Must Read

error: Content is protected !!