Wednesday, September 24, 2025

ಇದು ಟ್ರಂಪ್‌ ‘ಪುಂಡ’ ವ್ಯಾಪಾರ ನೀತಿ: ಭಾರತದ ಮೇಲಿನ ಅಮೆರಿಕ ಸುಂಕಕ್ಕೆ ಚೀನಾ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಧಿಸಿರುವ ಸುಂಕಕ್ಕೆ ಚೀನಾ ಖಂಡಿಸಿದ್ದು, ಭಾರತ ಪರ ಬ್ಯಾಟ್‌ ಬೀಸಿದೆ.

‘ಭಾರತದ ಸರಕುಗಳ ಮೇಲೆ ಶೇ. 25+25 = 50 ರಷ್ಟು ಸುಂಕ ವಿಧಿಸುವ ಆದೇಶ ಹೊರಡಿಸಿರುವ ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿಯಾಗಿದೆ,” ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್‌ ವಾಗ್ದಾಳಿ ನಡೆಸಿದ್ದಾರೆ.

ಬೆದರಿಕೆ ಹಾಕುವವರಿಗೆ ಮುಟ್ಟಿ ಕೊಳ್ಳುವಂತೆ ತಿರುಗೇಟು ನೀಡಿದರೆ ಒಂದು ಮೈಲಿ ದೂರ ಓಡಿ ಹೋಗಿ ನಿಲ್ಲುತ್ತಾರೆ. ಇಂಥ ಪುಂಡ ನೀತಿಗಳನ್ನು ಧೈರ್ಯವಾಗಿ ಎದುರಿಸಿದರೆ ತೆಪ್ಪಗಾಗುತ್ತಾರೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟ್ರಂಪ್‌ ಪ್ರತಿಸುಂಕ ಕ್ರಮಗಳು ವಿಶ್ವ ವ್ಯಾಪಾರ ಒಕ್ಕೂಟವನ್ನು ದುರ್ಬಲಗೊಳಿಸಲಿವೆ. ವಿಶ್ವಸಂಸ್ಥೆಯ ನಿಮಯಗಳಿಗೆ ವಿರುದ್ಧವಾಗಿದೆ ಎಂದು ಫೀಹಾಂಗ್‌ ಹೇಳಿದ್ದಾರೆ.

ಇದನ್ನೂ ಓದಿ