ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಇಂದು ಯೂರೋಪಿಯನ್ ಯೂನಿಯನ್(ಇಯು)-ಭಾರತ ನಡುವಿನ ಶೃಂಗಸಭೆಯ ಬಳಿಕ ಇಂದು ನಡೆದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ತಮ್ಮ ಸಾಗರೋತ್ತರ ಭಾರತೀಯತೆಯ ಪಾಸ್‌ಪೋರ್ಟ್ ತೋರಿಸುತ್ತಾ, ಈ ವ್ಯಾಪಾರ ನನಗೆ ವಿಶೇಷ ಅರ್ಥ ನೀಡಿದೆ ಎಂದು ತಿಳಿಸಿದರು.
ನಾನು ಯುರೋಪಿಯನ್ ಮಂಡಳಿಯ ಅಧ್ಯಕ್ಷ. ಇದರ ಜತೆಗೆ ಸಾಗರೋತ್ತರ ಭಾ
ಅನಾದಿ ಕಾಲದಿಂದಲೂ ಸಪ್ತ ಸಾಗರಗಳನ್ನು ದಾಟಿ ಜಗತ್ತಿನ ಮೂಲೆ ಮೂಲೆಯನ್ನೂ ತಲುಪಿದ ಭಾರತೀಯರು, ತಮ್ಮ ಪ್ರಾಮಾಣಿಕ ವ್ಯಕ್ತಿತ್ವದ ಮೂಲಕ ವಿದೇಶಿಯರ ಮನಗೆದಿದ್ದಾರೆ.
ಹೀಗೆ ವಿದೇಶಗಳಿಗೆ ವಲಸೆ ಹೋದ ಅದೆಷ್ಟೋ ಭಾರತೀಯರ ವಂಶ ಇಂದು ಅಲ್ಲಿಯೇ ನೆಲೆಸಿದೆ. ಈ ಪೈಕಿ ಕೆಲವರು ಆ ರಾಷ್ಟ್ರಗಳ ಮುಖ್ಯಸ್ಥರು ಅಥವಾ ಅಲ್ಲನ ಸರ್ಕಾರದಲ್ಲಿ ಪ್ರಮುಖ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡಿ ಕೋಸ್ಟಾ ಕೂಡ.
ಹೌದು, ಭಾರತ-ಇಯು ವ್ಯಾಪಾರ ಒಪ್ಪಂದ ಜಾರಿ ಸಂದರ್ಭದಲ್ಲಿ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೊ ಡಿ ಕೋಸ್ಟಾ ಅವರು ತಮ್ಮ ಭಾರತೀಯ ಮೂಲದ ಬಗ್ಗೆ ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ತಮ್ಮ ಭಾರತೀಯ ಸಾಗರೋತ್ತರ ಕಾರ್ಡ್(IOC)ನ್ನು ಪ್ರದರ್ಶಿಸಿ ಗಮನ ಸೆಳೆದರು.
‘ನಾನು ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ, ಆದರೆ ನಾನು ಸಾಗರೋತ್ತರ ಭಾರತೀಯ ನಾಗರಿಕನೂ ಆಗಿದ್ದೇನೆ. ನೀವು ಗ್ರಹಿಸಿದಂತೆ ಈ ಸಂಗತಿ ನನಗೆ ತುಂಬಾ ವಿಶೇಷವಾಗಿದೆ. ಗೋವಾದ ನನ್ನ ಮೂಲ ಬೇರುಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಮತ್ತು ಯುರೋಪ್ ಮತ್ತು ಭಾರತದ ನಡುವಿನ ಸಂಪರ್ಕವು ನನಗೆ ವೈಯಕ್ತಿಕವಾಗಿದೆ’ ಎಂದು ಹೇಳಿದರು.
ಹಿಂದಿನ ಪೋರ್ಚುಗೀಸ್ ವಸಾಹತು ಪ್ರದೇಶವಾದ ಗೋವಾದಲ್ಲಿ ಕೋಸ್ಟಾ ಅವರ ಕುಟುಂಬವು ತನ್ನ ಬೇರುಗಳನ್ನು ಹೊಂದಿದೆ. ಅವರ ತಾತ ಗೋವಾದಿಂದ ಪೋರ್ಚುಗಲ್‌ಗೆ ವಲಸೆ ಬಂದಿದ್ದರು. ಕೋಸ್ಟಾ ಅವರ ತಂದೆ ಪೋರ್ಚುಗಲ್‌ನಲ್ಲೇ ಹುಟ್ಟಿದ್ದರು. ಅದೇ ರೀತಿ ಅಂಟೋನಿಒಯೊ ಕೋಸ್ಟಾ ಅವರ ಜನನ ಕೂಡ ಪೋರ್ಚುಗಲ್‌ನಲ್ಲೇ ಆಗಿತ್ತು.
2017ರಲ್ಲಿ ಅಂಟೋನಿಯೊ ಕೋಸ್ಟಾ ಪೋರ್ಚುಗೀಸ್ ಪ್ರಧಾನಿ ಆಗಿ ಸೇವೆ ಸಲ್ಲಿಸುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಕೋಸ್ಟಾ ಅವರಿಗೆ ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್‌ನ್ನು ನೀಡಿದ್ದರು.
ಅಂಟೋನಿಯೊ ಕೋಸ್ಟಾ ಅವರು ಜನವರಿ 2017ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದರು.



