Saturday, December 13, 2025

ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈ ನಿಯಮ ಪಾಲಿಸಲೇಬೇಕು, ಇಲ್ಲಾ ದಂಡ ಬೀಳತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಕೆಂಪೇಗೌಡ ವಿಮಾನದಲ್ಲಿ ಹೊಸ ನಿಯಮ ಜಾರಿ ಮಾಡಲಾಗಿದೆ. ಇಂದಿನಿಂದ ಟರ್ಮಿನಲ್​​​​ 1ರಲ್ಲಿ ಯಲ್ಲೋ ಬೋರ್ಡ್​ ಕಾರುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಲ್ಲೋ ಬೋರ್ಡ್​ ಕಾರುಗಳಿಗೆ ಟರ್ಮಿನಲ್​​​​ 1ಕ್ಕೆ ಪ್ರವೇಶ ಇರುವುದಿಲ್ಲ. ವಿಮಾನ ನಿಲ್ದಾಣದ​ ಪಿಕ್​​​​ಅಪ್​​​​​ ಪಾಯಿಂಟ್​​​ನಲ್ಲಿ ಈ ನಿಷೇಧವನ್ನು ಮಾಡಲಾಗಿದೆ. ಅಸಂಘಟಿತ ಯಲ್ಲೋ ಬೋರ್ಡ್ ಕಾರುಗಳಿಗೆ P3, P4 ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಿನಿ ಧ್ವನಿವರ್ಧಕ ಮೂಲಕ ಪ್ರಯಾಣಿಕರಿಗೆ ಸಿಬ್ಬಂದಿಯಿಂದ ಮಾಹಿತಿ ನೀಡಲಾಗುವುದು. ಯಲ್ಲೋ ಬೋರ್ಡ್​ ಕಾರುಗಳು P3, P4ರಲ್ಲಿ ಪಾರ್ಕಿಂಗ್​​​​ ಮಾಡುವಂತೆ ಏರ್​ಪೋರ್ಟ್​ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಇನ್ನು ವೈಟ್​​​ ಬೋರ್ಡ್​ನ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಯಾರೂ ಕೂಡ ಗಲಾಟೆ ಮಾಡದಂತೆ ಕಾರು ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ವೈಟ್ ಬೋರ್ಡ್ ವಾಹನಗಳಿಗೂ ಟರ್ಮಿನಲ್​​​​ 1ರಲ್ಲಿ ನಿಲ್ಲಲು ಮೊದಲ 8 ನಿಮಿಷ ಅವಕಾಶ ಇದೆ. ಒಂದು ವೇಳೆ 8 ನಿಮಿಷಕ್ಕಿಂತ ಹೆಚ್ಚಾದರೆ ಅಂದರೆ ಮತ್ತೆ 5 ನಿಮಿಷ ಕಾಲ ನಿಲುಗಡೆಗೆ 150 ರೂ. ದಂಡ ಹಾಕಲಾಗುವುದು. ನಂತರ ಒಂದು ಎಚ್ಚರಿಕೆಯನ್ನು ನೀಡಲಾಗುವುದು. ಇದನ್ನು ನಿರ್ಲಕ್ಷ್ಯಿಸಿ ಮತ್ತೆ 5 ನಿಮಿಷ ನಿಂತರೆ 150 ದಂಡ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.

ಇಂದಿನಿದಲೇ ಈ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ಯಾವುದೇ ಕಾರು ಚಾಲಕರು ಕಿರಿಕಿರಿ ಮಾಡಬಾರದು ಎಂದು ವಿಮಾನ ನಿಲ್ದಾಣ ಸಿಬ್ಬಂದಿಗಳು ಹೇಳಿದ್ದಾರೆ. ಈ ಬಗ್ಗೆ ವಿಮಾನ ನಿಲ್ದಾಣದಲ್ಲಿ ಯಾವುದೇ ಕಿರಿಕಿರಿ ಆಗದಂತೆ ಬಂದೋಬಸ್ತ್ ವಹಿಸುವಂತೆ ಪೊಲೀಸರಿಗೆ ಹೇಳಿದ್ದಾರೆ.

error: Content is protected !!