Monday, December 8, 2025

ಉತ್ತರ ಕರ್ನಾಟಕದ ಸಮಸ್ಯೆ ಇತ್ಯರ್ಥಪಡಿಸೋಕೆ ಈ ಅಧಿವೇಶನ ಸಾಕಾಗೊಲ್ಲ: ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ವರದಿ ಬೆಳಗಾವಿ:

ಇಡೀ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು 10ದಿನ‌ದ ಅಧಿವೇಶನ ಸಾಧ್ಯವಾಗುತ್ತದೆಯೇ ಎಂದು ವಿಪ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಸೋಮವಾರ ಸುವರ್ಣಸೌಧದ ಪ್ರವೇಶದ್ವಾರದಲ್ಲಿ‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಉಕ ವಿಭಾಗದ ಸಮಸ್ಯೆಗಳ ಬಗೆಗೆ ಸರಕಾರ ತಲೆ ಕೆಡಿಸಿಕೊಳ್ಳದಿದ್ದರೆ ನಾವು ಸರಕಾರವನ್ನು ಸರಿದಾರಿಗೆ ತರಬೇಕಾಗುತ್ತದೆ. ಬೆಳಗಾವಿ ಅಧಿವೇಶನದ ಮುಖ್ಯ ಉದ್ದೇಶ ಇಡೀ ಅರ್ಧ ಕರ್ನಾಟಕದ ಎಲ್ಲ ಸಮಸ್ಯೆಗಳ ಇತ್ಯರ್ಥದ ಬಗ್ಗೆ ಸಾರ್ಥಕ ಚರ್ಚೆ ಆಗಬೇಕು ಎಂಬುವುದಾಗಿದೆ. ಆದರೆ ಕೇವಲ ಎರಡು ವಾರದ ಚರ್ಚೆ ಸಾಕಾಗುವುದಿಲ್ಲ. ಈ ಬಾರಿ 9ದಿನ ಮಾತ್ರ ಚರ್ಚೆ ಇಡಲಾಗಿದ್ದು, ಇದು ಸರಕಾರಕ್ಕೆ ಗಂಭೀರತೆ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ಶಾಲೆಗಳು, ಶಿಕ್ಷಕರು, ಅಂಗನವಾಡಿ, ಪಿಡಿಓ, ರೈತರ, ಕಾಋಮುಕರ, ನಿರುದ್ಯೋಗಿಗಳ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆಗೆ ನಿಲುವಳಿ ಸೂಚನೆ ಮಾಡಿಕೊಂಡಿದ್ದೇವೆ ಎಂದರು. ವಿರೋಧ ಪಕ್ಷಗಳತ್ತ ಬೊಟ್ಟು ಮಾಡುವ ಬದಲು ಮುಖ್ಯಮಂತ್ರಿ ತಮ್ಮ‌ ಸರಕಾರದ ಬದ್ಧತೆ ಪ್ರದರ್ಶಿಸಲಿ ಎಂದರು.

error: Content is protected !!