Thursday, September 4, 2025

Vegetables | ಈ ತರಕಾರಿ ನಿಮ್ಮ ಡಯಟ್ ನಲ್ಲಿದ್ರೆ ಸಾಕು! ನಿಮ್ಮ ದೇಹಕ್ಕೆ ಬೇಕಾದ ಪ್ರೊಟೀನ್ ಸಿಗುತ್ತೆ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಪ್ರೋಟೀನ್ ಅಂಶ ಅತ್ಯಗತ್ಯ. ಸಾಮಾನ್ಯವಾಗಿ ಜನರಿಗೆ ಪ್ರೋಟೀನ್ ಎಂದಾಕ್ಷಣ ಮೊಟ್ಟೆ, ಚಿಕನ್, ಮಟನ್ ನೆನಪಾಗುತ್ತದೆ. ಆದರೆ ಪ್ರೋಟೀನ್ ಕೇವಲ ಮಾಂಸಾಹಾರದಲ್ಲೇ ಸಿಗುತ್ತದೆ ಎಂಬುದು ತಪ್ಪು ನಂಬಿಕೆ. ಅನೇಕ ಸಸ್ಯಾಹಾರಗಳಲ್ಲಿ ಸಹ ಪ್ರೋಟೀನ್ ಅಂಶ ಹೇರಳವಾಗಿ ದೊರೆಯುತ್ತದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಇಂತಹ ಸಸ್ಯಾಹಾರಗಳನ್ನು ಸೇರಿಸಿಕೊಂಡರೆ ದೈಹಿಕ ಶಕ್ತಿಯ ಜೊತೆಗೆ ಸಮಗ್ರ ಆರೋಗ್ಯವೂ ಉತ್ತಮವಾಗಿರುತ್ತದೆ.

ಬ್ರಸೆಲ್ಸ್ ಮೊಗ್ಗುಗಳು (Mini Cabbage)

ಸಣ್ಣ ಗಾತ್ರದ ಹೂಕೋಸು ಹೋಲುವ ಬ್ರಸೆಲ್ಸ್ ಮೊಗ್ಗುಗಳಲ್ಲಿ 3 ಗ್ರಾಂನಷ್ಟು ಪ್ರೋಟೀನ್ ದೊರೆಯುತ್ತದೆ. ಇವು ಆ್ಯಂಟಿಆಕ್ಸಿಡೆಂಟ್ಸ್, ವಿಟಮಿನ್ C ಹಾಗೂ K ಸಮೃದ್ಧವಾಗಿದ್ದು, ರೋಸ್ಟ್ ಮಾಡಿಕೊಂಡು ತಿಂದರೆ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಪಾಲಕ್ ಸೊಪ್ಪು

ಹಸಿರು ತರಕಾರಿಗಳಲ್ಲಿ ಪಾಲಕ್ ಪ್ರೋಟೀನ್ ಹಾಗೂ ಕಬ್ಬಿಣದ ಪ್ರಮುಖ ಮೂಲ. ಒಂದು ಬಟ್ಟಲು ಬೇಯಿಸಿದ ಪಾಲಕ್‌ನಲ್ಲಿ 6 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಇದಲ್ಲದೆ ವಿಟಮಿನ್ A ಹಾಗೂ K ದೇಹಕ್ಕೆ ಪೂರೈಕೆ ಮಾಡುತ್ತದೆ.

ಕೊಸುಗಡ್ಡೆ (Broccoli)

ಪೌಷ್ಠಿಕಾಂಶಗಳಲ್ಲಿ ಶ್ರೀಮಂತವಾದ ಕೊಸುಗಡ್ಡೆಯಲ್ಲಿ 4 ರಿಂದ 6 ಗ್ರಾಂ ಪ್ರೋಟೀನ್ ಇರುತ್ತದೆ. ಇದನ್ನು “ಪೋಷಕಾಂಶಗಳ ಶಕ್ತಿಕೇಂದ್ರ” ಎಂದೇ ಕರೆಯುತ್ತಾರೆ. ನಿಯಮಿತ ಸೇವನೆಯಿಂದ ಶಕ್ತಿ, ಜೀವಸತ್ವ ಹಾಗೂ ಖನಿಜಾಂಶ ದೊರೆಯುತ್ತದೆ.

ಬಟಾಣಿ ಕಾಳು

ಒಂದು ಕಪ್ ಬಟಾಣಿ ಕಾಳಿನಲ್ಲಿ 9 ಗ್ರಾಂ ಪ್ರೋಟೀನ್ ಇರುತ್ತದೆ. ಫೈಬರ್, ವಿಟಮಿನ್ C ಮತ್ತು ವಿಟಮಿನ್ A ಕೂಡ ಸಮೃದ್ಧವಾಗಿರುವುದರಿಂದ ಇದು ಜೀರ್ಣಕ್ರಿಯೆ ಸುಧಾರಿಸಿ ಶಕ್ತಿಯನ್ನು ಹೆಚ್ಚಿಸುತ್ತದೆ.

ದ್ವಿದಳ ಧಾನ್ಯಗಳು

ಬೇಳೆ, ಕಡಲೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳು ಪ್ರೋಟೀನ್‌ನ ಪ್ರಮುಖ ಮೂಲ. ಒಂದು ಕಪ್ ಧಾನ್ಯಗಳಲ್ಲಿ 18 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಜೊತೆಗೆ ಫೈಬರ್, ವಿಟಮಿನ್ ಮತ್ತು ಖನಿಜಾಂಶಗಳೂ ಇವೆ.

ಪ್ರೋಟೀನ್ ಎಂದರೆ ಕೇವಲ ಮಾಂಸಾಹಾರವಲ್ಲ, ಸಸ್ಯಾಹಾರದಲ್ಲಿಯೂ ಸಾಕಷ್ಟು ಪ್ರೋಟೀನ್ ಅಂಶ ದೊರೆಯುತ್ತದೆ. ಬ್ರಸೆಲ್ಸ್ ಮೊಗ್ಗು, ಪಾಲಕ್, ಕೊಸುಗಡ್ಡೆ, ಬಟಾಣಿ ಹಾಗೂ ದ್ವಿದಳ ಧಾನ್ಯಗಳು ನಮ್ಮ ಆಹಾರದಲ್ಲಿ ಸೇರಿಸಿದರೆ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಸ್ನಾಯುಬಲ ಹೆಚ್ಚುತ್ತದೆ. ಆದ್ದರಿಂದ ಪ್ರೋಟೀನ್‌ಗೆ ಮಾಂಸಾಹಾರದ ಮೊರೆ ಹೋಗದೆ ಸಸ್ಯಾಹಾರವನ್ನೇ ಆರಿಸಿಕೊಳ್ಳಬಹುದು.

ಇದನ್ನೂ ಓದಿ