Sunday, November 9, 2025

ಈ ಗೆಲುವು ನಮ್ಮದಲ್ಲ, ನಿಮ್ಮದು: ಕಾಂತಾರ ಟೀಂನಿಂದ ಸಕ್ಸಸ್‌ ಸೆಲಬ್ರೇಷನ್‌ ಈವೆಂಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಯಿತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 900 ಕೋಟಿ ರೂಪಾಯಿಗೂ ಹೆಚ್ಚು. ಈ ಚಿತ್ರ ಈಗ ಒಟಿಟಿಗೆ ಬಂದಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಯಶಸ್ಸಿನ ಸೆಲೆಬ್ರೇಷನ್​​ನ ತಂಡ ಮಾಡಿದೆ. ಈ ಸಂದರ್ಭದ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ‘ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ. ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಕೇಕ್ ಕತ್ತರಿಸಿ ತಂಡ ಸಂಭ್ರಮಿಸಿದೆ.

‘ಕಾಂತಾರ’ ಎಂದು ಬರೆದಿರುವ ಕೇಕ್​ನ ತಂಡದವರು ಕತ್ತರಿಸಿದ್ದಾರೆ. ‘ಈ ಗೆಲುವು ಕೇವಲ ನಮ್ಮದಲ್ಲ, ಎಲ್ಲರದ್ದು. ನಿಮ್ಮ ಪ್ರೀತಿಗೆ ಎಂದೆಂದಿಗೂ ಋಣಿ’ ಎಂದು ಹೊಂಬಾಳೆ ಫಿಲ್ಮ್ಸ್ ಈ ಪೋಸ್ಟ್​ಗೆ ಕ್ಯಾಪ್ಶನ್ ನೀಡಿದೆ. ಈ ಮೂಲಕ ಗೆಲುವನ್ನು ಜನರಿಗೆ ಅರ್ಪಿಸಿದೆ.

ನಾಯಕ ರಿಷಬ್ ಶೆಟ್ಟಿ, ಅವರ ಪತ್ನಿ ಪ್ರಗತಿ ಶೆಟ್ಟಿ, ನಟಿ ರುಕ್ಮಿಣಿ ವಸಂತ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ತಂಡ ಸೆಲೆಬ್ರೇಷನ್​ನಲ್ಲಿ ಭಾಗಿ ಆಗಿದೆ. ಎಲ್ಲರ ಮೊಗದಲ್ಲೂ ನಗು ಇತ್ತು. ಎಲ್ಲರೂ ಖುಷಿಯಿಂದ ಸೆಲೆಬ್ರೇಷನ್​ ಅಲ್ಲಿ ಭಾಗಿ ಆದರು.

error: Content is protected !!