ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬು ಕಟಾವು ವೇಳೆ ಯಂತ್ರಕ್ಕೆ ಸಿಲುಕಿ ಮಹಿಳಾ ಕಾರ್ಮಿಕರಿಬ್ಬರು ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.
ಬಾರವ್ವ ಕೋಬಡಿ(60), ಲಕ್ಷ್ಮೀಬಾಯಿ ರುದ್ರಗೌಡರ್(65) ಮೃತರು. ಸದ್ಯ ಸ್ಥಳದಲ್ಲಿ ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಬ್ಬಿನ ಗದ್ದೆಗೆ ಕೂಲಿ ಕೆಲಸಕ್ಕೆಂದು ಇಬ್ಬರು ಮಹಿಳೆಯರು ಬಂದಿದ್ದರು. ಕಬ್ಬು ಕಟಾವು ವೇಳೆ ಮುಂದೆ ನೋಡದೇ ಚಾಲಕ ವಾಹನ ಚಲಾಯಿಸಿದ್ದಾನೆ. ಈ ವೇಳೆ ಇಬ್ಬರು ಮಹಿಳೆಯರ ತಲೆ ಯಂತ್ರದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಹೊಟ್ಟೆಪಾಡಿಗೆ ಹೋದವರು ಜೀವ ಬಿಟ್ಟರು! ಕಬ್ಬು ಕಟಾವು ಯಂತ್ರಕ್ಕೆ ಸಿಲುಕಿ ಮಹಿಳಾ ಕಾರ್ಮಿಕರಿಬ್ಬರು ಸಾವು

