ಹೊಸದಿಗಂತ ಮುಂಡಗೋಡ:
ಪಟ್ಟಣದ ಬನ್ನಿಕಟ್ಟಿ ಸಮೀಪ ಭಾನುವಾರ ಮಧ್ಯಾಹ್ನ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಟ್ರೈಲರ್‌ನ ಕೊಂಡಿ ಕಳಚಿ ಪಲ್ಟಿಯಾದ ಪರಿಣಾಮ, ರಸ್ತೆಯಲ್ಲಿದ್ದ ಮೂರು ಬೈಕ್‌ಗಳು ಜಖಂಗೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಸವಾರರು ಸಮಯಪ್ರಜ್ಞೆ ಮೆರೆದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ.

ರೈತರ ಗದ್ದೆಯಿಂದ ಕಬ್ಬು ಕಟಾವು ಮಾಡಿಕೊಂಡು ಸಕ್ಕರೆ ಕಾರ್ಖಾನೆಗೆ ಹೊರಟಿದ್ದ ಟ್ರ್ಯಾಕ್ಟರ್, ಎರಡು ಟ್ರೈಲರ್‌ಗಳನ್ನು ಎಳೆದುಕೊಂಡು ಹೋಗುತ್ತಿತ್ತು. ಬನ್ನಿಕಟ್ಟಿ ಹತ್ತಿರ ಸಾಗುತ್ತಿದ್ದಾಗ ಹಠಾತ್ತನೆ ಟ್ರೈಲರ್‌ನ ಕೊಂಡಿ ಕಳಚಿಕೊಂಡಿದೆ. ತಕ್ಷಣವೇ ನಿಯಂತ್ರಣ ತಪ್ಪಿದ ಟ್ರೈಲರ್ ಹಿಂದಕ್ಕೆ ಚಲಿಸಲು ಆರಂಭಿಸಿದೆ.
ಇದನ್ನು ಗಮನಿಸಿದ ರಸ್ತೆ ಬದಿಯ ಸವಾರರು ಹಾಗೂ ಸಾರ್ವಜನಿಕರು ತಕ್ಷಣವೇ ಎಚ್ಚೆತ್ತುಕೊಂಡು ತಮ್ಮ ವಾಹನಗಳನ್ನು ಬಿಟ್ಟು ಪಕ್ಕಕ್ಕೆ ಓಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಟ್ರೈಲರ್ ರಸ್ತೆಯ ಮೇಲೆ ಪಲ್ಟಿಯಾಗಿದ್ದು, ಅದರ ಅಡಿಯಲ್ಲಿ ಸಿಲುಕಿದ ಮೂರು ಬೈಕ್‌ಗಳು ಸಂಪೂರ್ಣವಾಗಿ ಜಖಂಗೊಂಡಿವೆ.
ಅಪಘಾತದ ತೀವ್ರತೆಗೆ ರಸ್ತೆಯಾದ್ಯಂತ ಕಬ್ಬು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಸುಮಾರು ಒಂದು ಗಂಟೆ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳೀಯ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ರಸ್ತೆಯಲ್ಲಿದ್ದ ಕಬ್ಬನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಹಗಲು ಹೊತ್ತಿನಲ್ಲಿ ಅತಿಯಾದ ಭಾರ ಹೊತ್ತ ಕಬ್ಬಿನ ಟ್ರ್ಯಾಕ್ಟರ್‌ಗಳು ಪಟ್ಟಣದ ರಸ್ತೆಗಳಲ್ಲಿ ಸಂಚರಿಸುವುದರಿಂದ ಇಂತಹ ಅಪಾಯಗಳು ಪದೇ ಪದೇ ಸಂಭವಿಸುತ್ತಿವೆ. “ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಬ್ಬು ಸಾಗಿಸುವ ವಾಹನಗಳಿಗೆ ಹಗಲು ಹೊತ್ತಿನಲ್ಲಿ ನಿಷೇಧ ಹೇರಬೇಕು ಮತ್ತು ಕೇವಲ ರಾತ್ರಿ ಸಮಯದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡ

