Saturday, November 22, 2025

ಇಂದಿನಿಂದ ಮೂರು ದಿನ ಬೆಂಗಳೂರು ಎಡಿಆರ್​ ಸಪ್ತಾಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಸ್ಥಗಾರರಿಗೆ ವ್ಯವಸ್ಥೆ ಮತ್ತು ಎಡಿಆರ್ ​(ಪರ್ಯಾಯ ವ್ಯಾಜ್ಯ ಪರಿಹಾರ) ಕುರಿತಂತೆ ವಿಶ್ವಾಸ ಮೂಡಿಸುವ ಸಲುವಾಗಿ ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರ, ಬೆಂಗಳೂರು ವಕೀಲರ ಸಂಘದ ಸಹಯೋಗದೊಂದಿಗೆ ಬೆಂಗಳೂರು ಎಡಿಆರ್ ವೀಕ್ ಟ್ರಸ್ಟ್ ವತಿಯಿಂದ ನವೆಂಬರ್​ 21ರಿಂದ ಮೂರು ದಿನಗಳ ಕಾಲ “ಬೆಂಗಳೂರು ಎಡಿಆರ್​ ಸಪ್ತಾಹ 2025” ಅನ್ನು ಹಮ್ಮಿಕೊಳ್ಳಲಾಗಿದೆ.

ನವೆಂಬರ್​ 21ರಿಂದ 23ರ ವರೆಗೂ ನಗರದ ನ್ಯಾಯಾಂಗ ಅಕಾಡೆಮಿಯಲ್ಲಿ ಎರಡನೇ ವರ್ಷದ ಬೆಂಗಳೂರು ಎಡಿಆರ್ ಸಪ್ತಾಹ ನಡೆಯಲಿದ್ದು, ಪರ್ಯಾಯ ವಿವಾದ ಪರಿಹಾರದ ಕುರಿತ ಬೆಂಗಳೂರು ಜಾಗತಿಕ ಚರ್ಚಾ ಕೇಂದ್ರವಾಗಲಿದೆ. ಕಾರ್ಯಕ್ರಮದಲ್ಲಿ ನ್ಯಾಯಾಂಗ ಕ್ಷೇತ್ರ, ಕಾನೂನು ಅಭ್ಯಾಸ, ಶೈಕ್ಷಣಿಕ ಮತ್ತು ಕಾರ್ಪೊರೇಟ್ ವಲಯದ ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ಮಧ್ಯಸ್ಥಿಕೆ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಒತ್ತು ನೀಡುವುದು, ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಮತ್ತು ಎದುರಾಗುವಂತಹ ಹೊಸ ಪ್ರವೃತ್ತಿಗಳನ್ನು ಪರಿಹರಿಸುವ ಸಲುವಾಗಿ ಸಂವಾದ ಮತ್ತು ಚರ್ಚೆಗಳು ಹಾಗೂ ಪ್ರಾಯೋಗಿಕ ಕಾರ್ಯಾಗಾರ ಏರ್ಪಡಿಸಲಾಗಿದೆ.

ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕತೆ ಕುರಿತಂತೆ ಸಾಂಸ್ಥಿಕ ಚೌಕಟ್ಟುಗಳು, ವಿವಾದ ಪರಿಹಾರ ಕಾರ್ಯ ವಿಧಾನಗಳಲ್ಲಿ ತಾಂತ್ರಿಕ ನಾವೀನ್ಯತೆ, ಷೇರುದಾರ ಮತ್ತು ವಾಣಿಜ್ಯ ವಿವಾದಗಳ ಪರಿಹಾರ ಮತ್ತು ಅಂತಾರಾಷ್ಟ್ರೀಯ ಎಡಿಆರ್​ ವ್ಯವಸ್ಥೆಯಲ್ಲಿ ಭಾರತದ ಕಾರ್ಯತಂತ್ರದ ಸ್ಥಾನೀಕರಣವನ್ನು ಒಳಗೊಂಡ ಗಣನೀಯ ಚರ್ಚೆಗಳಲ್ಲಿ ಸಂವಾದದಲ್ಲಿ ತೊಡಗಿಸಿಕೊಂಡಿರುವ ಪ್ರಮುಖರು ಭಾಗಿಯಾಗಲಿದ್ದಾರೆ.

error: Content is protected !!