Monday, November 10, 2025

ದೇಶಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು: ಮೂವರು ಐಸಿಸ್‌ ಉಗ್ರರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಮೂವರು ಐಸಿಸ್‌ ಉಗ್ರರನ್ನ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ ಅಹಮದಾಬಾದ್‌ನಲ್ಲಿ ಬಂಧಿಸಿದೆ.

ಎಟಿಎಸ್‌ ಪ್ರಕಾರ, ಬಂಧಿತ ಉಗ್ರರು ಕಳೆದ ಒಂದು ವರ್ಷದಿಂದಲೂ ಕಣ್ಗಾವಲಿನಲ್ಲಿದ್ದರು. ಶಸ್ತ್ರಾಸ್ತ್ರಗಳನ್ನ ವಿನಿಮಯ ಮಾಡಿಕೊಳ್ಳುವ ವೇಳೆ ಸಿಕ್ಕಿಬಿದ್ದಿದ್ದಾರೆ. ಮೂವರು 2 ಪ್ರತ್ಯೇಕ ಮಾಡ್ಯೂಲ್‌ಗಳಿಗೆ ಸೇರಿದವರಾಗಿದ್ದರು. ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ವಿದ್ವಂಸಕ ಕೃತ್ಯಗಳನ್ನ ಎಸಗಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

ಸದ್ಯ ಮೂವರನ್ನ ಬಂಧಿಸಿರುವ ಅಧಿಕಾರಿಗಳು ದಾಳಿ ನಡೆಸಲು ಉದ್ದೇಶಿಸಿದ್ದ ಸಂಭಾವ್ಯ ಗುರಿ ಮತ್ತು ಸ್ಥಳಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

error: Content is protected !!