Tuesday, September 30, 2025

ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ: ಮಹಿಳೆ ಸೇರಿದಂತೆ ಮೂವರು ನಕ್ಸಲರ ಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಕ್ಸಲರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಚಿಂಡ್‌ಖರಕ್ ಕಾಡಿನಲ್ಲಿ ಮೂವರು ನಕ್ಸಲರನ್ನು ಹೊಡೆದುರುಳಿಸಿದೆ.

ಕಂಕೇರ್-ಗರಿಯಾಬಂದ್ ಡಿಆರ್‌ಜಿ ಮತ್ತು ಬಿಎಸ್‌ಎಫ್ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ದೀರ್ಘಾವಧಿಯ ಗುಂಡಿನ ಚಕಮಕಿ ನಡೆಯಿತು. ಎನ್‌ಕೌಂಟರ್ ನಂತರ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರ ಮೃತದೇಹಗಳನ್ನು ಕಾಡಿನಿಂದ ವಶಪಡಿಸಿಕೊಳ್ಳಲಾಗಿದೆ.

ಸ್ಥಳದಿಂದ ಪೊಲೀಸರು ಒಂದು ಎಸ್‌ಎಲ್‌ಆರ್ ರೈಫಲ್, .303 ರೈಫಲ್ ಮತ್ತು 12 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ನಕ್ಸಲರಿಗೆ ಸಂಬಂಧಿಸಿದ ಹಲವಾರು ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ. ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ನಕ್ಸಲರಲ್ಲಿ 8 ಲಕ್ಷ ರೂಪಾಯಿ ಬಹುಮಾನ ಹೊಂದಿರುವ ನಕ್ಸಲ್ ಸರ್ವಾನ್ ಮಡ್ಕಮ್, 5 ಲಕ್ಷ ರೂ ಬಹುಮಾನ ಹೊಂದಿದ್ದ ನಕ್ಸಲ್ ರಾಜೇಶ್ ಅಲಿಯಾಸ್ ರಾಕೇಶ್ ಹೆಮ್ಲಾ ಮತ್ತು 1 ಲಕ್ಷ ರೂ. ಬಹುಮಾನ ಹೊಂದಿದ್ದ ನಕ್ಸಲ್ ಬಸಂತಿ ಕುಂಜಮ್ ಸೇರಿದ್ದಾರೆ.