Monday, January 26, 2026
Monday, January 26, 2026
spot_img

ತಿಲಕ್ ವರ್ಮಾ ಕಮ್‌ಬ್ಯಾಕ್: ಫೆ.3ಕ್ಕೆ ಟೀಮ್ ಇಂಡಿಯಾ ಸೇರಲಿರುವ ಎಡಗೈ ಬ್ಯಾಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಮಹಾಸಮರಕ್ಕೂ ಮುನ್ನ ಭಾರತ ತಂಡಕ್ಕೆ ಶುಭ ಸುದ್ದಿಯೊಂದು ಲಭಿಸಿದೆ. ಗಾಯದ ಸಮಸ್ಯೆಯಿಂದಾಗಿ ನ್ಯೂಝಿಲೆಂಡ್ ವಿರುದ್ಧದ ಆರಂಭಿಕ ಪಂದ್ಯಗಳಿಂದ ದೂರವಿದ್ದ ಸ್ಫೋಟಕ ಎಡಗೈ ಬ್ಯಾಟರ್ ತಿಲಕ್ ವರ್ಮಾ ಈಗ ಸಂಪೂರ್ಣ ಫಿಟ್ ಆಗಿದ್ದು, ವಿಶ್ವಕಪ್ ತಂಡವನ್ನು ಸೇರಿಕೊಳ್ಳಲು ಸಜ್ಜಾಗಿದ್ದಾರೆ.

ವಿಜಯ ಹಝಾರೆ ಟೂರ್ನಿಯ ಸಂದರ್ಭದಲ್ಲಿ ತೊಡೆಸಂಧು ನೋವಿನಿಂದ ಬಳಲುತ್ತಿದ್ದ ತಿಲಕ್ ವರ್ಮಾ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ನಂತರ ತೀವ್ರ ನಿಗಾ ಹಾಗೂ ಪುನಶ್ಚೇತನ ಶಿಬಿರದಲ್ಲಿದ್ದ ಅವರು, ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಫೆಬ್ರವರಿ 3ರಂದು ಅವರು ಅಧಿಕೃತವಾಗಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ತಿಲಕ್ ವರ್ಮಾ ಅವರ ಅಲಭ್ಯತೆಯಲ್ಲಿ ನ್ಯೂಝಿಲೆಂಡ್ ಸರಣಿಗೆ ಆಯ್ಕೆಯಾಗಿದ್ದ ಶ್ರೇಯಸ್ ಅಯ್ಯರ್ ಅವರ ವಿಶ್ವಕಪ್ ಕನಸು ಸದ್ಯಕ್ಕೆ ಭಗ್ನಗೊಂಡಂತಿದೆ. ತಿಲಕ್ ಅವರು ಅಭ್ಯಾಸ ಪಂದ್ಯಗಳಿಗೂ ಮುನ್ನವೇ ಲಭ್ಯವಿರುವುದರಿಂದ, ಮ್ಯಾನೇಜ್‌ಮೆಂಟ್ ಮೊದಲ ಆದ್ಯತೆಯನ್ನು ಎಡಗೈ ಬ್ಯಾಟರ್‌ಗೇ ನೀಡಲಿದೆ. ಇದು ಭಾರತದ ಮಧ್ಯಮ ಕ್ರಮಾಂಕದ ಬಲವನ್ನು ದ್ವಿಗುಣಗೊಳಿಸಿದೆ.

ವಿಶ್ವಕಪ್‌ಗೆ ಭಾರತದ ಅಂತಿಮ ಪಡೆಯ ವಿವರ:

ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್.

Must Read