ಹೊಸದಿಗಂತ ವರದಿ,ಮುಲ್ಕಿ:
ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ
ಗಾಯಾಳು ಬೈಕ್ ಸವಾರನನ್ನು ಸುರತ್ಕಲ್ ಹರ್ಷ ಸಂಸ್ಥೆಯ ನೌಕರ ರಾಘವೇಂದ್ರ ರಾವ್ (40) ಎಂದು ಗುರುತಿಸಲಾಗಿದೆ
ಹಳೆಯಂಗಡಿ ಒಳಪೇಟೆಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಉಡುಪಿ ಕಡೆಯಿಂದ ಡಾಮರು ಹೇರಿಕೋಡು ಪಕ್ಷಿಕೆರೆಗೆ ಹೋಗುತ್ತಿದ್ದ ಟಿಪ್ಪರ್
ಹಳೆಯಂಗಡಿ ಜಂಕ್ಷನ್ ಬಳಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬೈಕ್ ಟಿಪ್ಪರ್ ನ ಚಕ್ರದ ಅಡಿಗೆ ಬಿದ್ದು ಅಪ್ಪಚ್ಚಿಯಾಗಿದ್ದು ಸವಾರ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ.
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿದ್ದು, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ



