ಹೊಸ ದಿಗಂತ ವರದಿ, ವಿಜಯಪುರ:
ಟಿಪ್ಪರ್- ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಗರದ ರೇಡಿಯೋ ಕೇಂದ್ರದ ಬಳಿ ನಡೆದಿದೆ.
ಮೃತಪಟ್ಟವನನ್ನು ಇಲ್ಲಿನ ಉದಯಕುಮಾರ ಬಾಬುರಾವ್ ಚವ್ಹಾಣ (40) ಎಂದು ಗುರುತಿಸಲಾಗಿದೆ.
ಉದಯಕುಮಾರ ಚವ್ಹಾಣ ಈತ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಈ ವೇಳೆ ಟಿಪ್ಪರ್ ಸ್ಥಳದಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.