Monday, December 22, 2025

Tips | ರೊಟ್ಟಿ-ದೋಸೆ ತವಾಗೆ ಅಂಟಿಕೊಳ್ಳುತ್ತಿದೆಯೇ? ಕಿರಿಕಿರಿ ಬೇಡ, ಇಲ್ಲಿದೆ 2 ನಿಮಿಷದ ಸ್ಮಾರ್ಟ್ ಐಡಿಯಾ!

ಅಡುಗೆ ಮನೆಯಲ್ಲಿ ಗೃಹಿಣಿಯರ ದೊಡ್ಡ ತಲೆನೋವೆಂದರೆ ರೊಟ್ಟಿ ಅಥವಾ ದೋಸೆ ಮಾಡುವಾಗ ಅದು ತವಾಗೆ ಅಂಟಿಕೊಳ್ಳುವುದು. ಸರಿಯಾಗಿ ಎದ್ದು ಬರದ ರೊಟ್ಟಿಗಳು ಸೀದು ಹೋದಾಗ ಬೇಸರವಾಗುವುದು ಸಹಜ. ಈ ಸಮಸ್ಯೆಗೆ ಪರಿಹಾರವಾಗಿ ಹಲವರು ಹೊಸ ತವಾ ಖರೀದಿಸುತ್ತಾರೆ ಅಥವಾ ನಾನ್‌ಸ್ಟಿಕ್ ಪ್ಯಾನ್‌ ಮೊರೆ ಹೋಗುತ್ತಾರೆ. ಆದರೆ ನಿಜವಾದ ಸಮಸ್ಯೆ ಇರುವುದು ತವಾದಲ್ಲಲ್ಲ, ಅದನ್ನು ನಿರ್ವಹಿಸುವ ರೀತಿಯಲ್ಲಿ!

ತವಾದ ಮೇಲೆ ಹಳೆಯ ಎಣ್ಣೆಯ ಜಿಡ್ಡು ಮತ್ತು ಹಿಟ್ಟಿನ ಕಣಗಳು ಸಂಗ್ರಹವಾದಾಗ ರೊಟ್ಟಿಗಳು ಅಂಟಿಕೊಳ್ಳುತ್ತವೆ. ಇದನ್ನು ಸರಿಪಡಿಸಲು ಮನೆಯಲ್ಲೇ ಇರುವ ಎಣ್ಣೆ ಮತ್ತು ಉಪ್ಪಿನ ಸಹಾಯದಿಂದ ‘ಸೀಸನಿಂಗ್’ ಮಾಡಿದರೆ ಸಾಕು, ನಿಮ್ಮ ಹಳೆಯ ತವಾ ಕೂಡ ನಾನ್‌ಸ್ಟಿಕ್‌ನಂತೆ ಕೆಲಸ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು:

ಎಣ್ಣೆ: 1 ಚಮಚ

ಉಪ್ಪು: 1 ಚಮಚ (ಪುಡಿ ಉಪ್ಪು)

ಸ್ವಚ್ಛವಾದ ಕಾಟನ್ ಬಟ್ಟೆ

ಸ್ವಲ್ಪ ನೀರು

ಮೊದಲು ತವಾವನ್ನು ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿ ಚೆನ್ನಾಗಿ ಬಿಸಿಯಾಗಲು ಬಿಡಿ. ಬಿಸಿಯಾದ ತವಾದ ಮೇಲೆ ಎಣ್ಣೆ ಮತ್ತು ಉಪ್ಪನ್ನು ಹಾಕಿ. ಈ ಮಿಶ್ರಣವು ತವಾದ ಮೇಲಿರುವ ಜಿಡ್ಡನ್ನು ತೆಗೆದು ಹಾಕಿ ನಯವಾದ ಪದರವನ್ನು ಸೃಷ್ಟಿಸುತ್ತದೆ. ಒಂದು ಬಟ್ಟೆಯನ್ನು ದುಂಡಗೆ ಮಡಚಿಕೊಂಡು, ತವಾದ ಎಲ್ಲಾ ಕಡೆ ಎಣ್ಣೆ-ಉಪ್ಪಿನ ಮಿಶ್ರಣವನ್ನು 1 ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿ. ಇದು ತವಾದ ಮೇಲಿರುವ ಸುಟ್ಟ ಕಣಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ. ನಂತರ ಸ್ವಲ್ಪ ನೀರು ಚಿಮುಕಿಸಿ, ಬಟ್ಟೆಯಿಂದ ಒರೆಸಿದರೆ ನಿಮ್ಮ ತವಾ ಈಗ ಹೊಸದರಂತೆ ಹೊಳೆಯುತ್ತದೆ.

ಈ ರೀತಿ ಮಾಡಿದ ನಂತರ ರೊಟ್ಟಿ ಅಥವಾ ದೋಸೆ ಹಾಕಿದರೆ, ಅದು ಅಂಟಿಕೊಳ್ಳದೆ ಸುಲಭವಾಗಿ ತಿರುಗಿಸಲು ಬರುತ್ತದೆ ಮತ್ತು ರೊಟ್ಟಿಗಳು ಚೆನ್ನಾಗಿ ಉಬ್ಬುತ್ತವೆ. ಕಬ್ಬಿಣದ ತವಾವನ್ನು ಈ ರೀತಿ ಬಳಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದು ದೇಹಕ್ಕೆ ನೈಸರ್ಗಿಕವಾಗಿ ಕಬ್ಬಿಣಾಂಶವನ್ನು ಒದಗಿಸುತ್ತದೆ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಹೊಸ ತವಾ ಖರೀದಿಸುವ ಅವಶ್ಯಕತೆಯೇ ಇರುವುದಿಲ್ಲ.

error: Content is protected !!