ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ನಿರ್ಮಿಸುವುದಾಗಿ ಘೋಷಿಸುವ ಮೂಲಕ ಹೊಸ ವಿವಾದವನ್ನು ಉಂಟು ಮಾಡಿದ ತೃಣಮೂಲ ಕಾಂಗ್ರೆಸ್ ನ ಮುರ್ಷಿದಾಬಾದ್ ಶಾಸಕ ಹುಮಾಯೂನ್ ಕಬೀರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಈ ಹಿಂದೆ ಹಲವು ಬಾರಿ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಅವರು ಇದನ್ನು ನಿರ್ಲಕ್ಷಿಸಿರುವುದರಿಂದ ಪಕ್ಷದಿಂದ ಅವರನ್ನು ಅಮಾನತುಗೊಳಿಸಿರುವುದಾಗಿ ಟಿಎಂಸಿಯ ಹಿರಿಯ ನಾಯಕ ಮತ್ತು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ.
ಕಬೀರ್ ಅವರು ಬಿಜೆಪಿ ಬೆಂಬಲದೊಂದಿಗೆ ರಾಜಕೀಯ ಸಮಸ್ಯೆಗಳನ್ನು ಕೋಮುವಾದಿ ವಿಚಾರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಟಿಎಂಸಿಯ ಹಿರಿಯ ನಾಯಕ ಫಿರ್ಹಾದ್ ಹಕೀಮ್ ಅವರು ಪಕ್ಷದ ನಿರ್ಧಾರವನ್ನು ಗುರುವಾರ ಘೋಷಿಸಿದ್ದಾರೆ.
ಈ ಹಿಂದೆ ಕಬೀರ್ ಅವರಿಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಅವರು ತಮ್ಮ ನಡೆಯನ್ನು ಬದಲಿಸಲಿಲ್ಲ. ಹೀಗಾಗಿ ಇದೀಗ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ. ಇನ್ನು ಮುಂದೆ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹಕೀಮ್ ತಿಳಿಸಿದ್ದಾರೆ.
ಕಬೀರ್ ಅವರು ಇತ್ತೀಚೆಗೆ ಬಾಬರಿ ಮಸೀದಿ ನಿರ್ಮಿಸುತ್ತೇನೆ ಎಂಡಿ ಜೆ;ಒಡ್ಡಿ. ಇದು ಪ್ರಚೋದನಕಾರಿ ಮತ್ತು ಅನಗತ್ಯ ಎಂದಿರುವ ಹಕೀಮ್, ನಾವು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಇದೀಗ ಟಿಎಂಸಿಯ ನಿರ್ಧಾರದಂತೆ ಅವರನ್ನು ಅಮಾನತುಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

