January 30, 2026
Friday, January 30, 2026
spot_img

ಇಂದು ಮಹಾತ್ಮ ಗಾಂಧಿ ಪುಣ್ಯತಿಥಿ: ಗಣ್ಯರಿಂದ ಗೌರವ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವ ಸಮನ ಸಲ್ಲಿಸಿದರು. ಗಾಂಧಿ ಅವರ ‘ಸ್ವದೇಶಿ’ ಕರೆಯು ಅಭಿವೃದ್ಧಿ ಹೊಂದಿದ ಭಾರತಕ್ಕೆ ಮೂಲಭೂತ ತತ್ವವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿಯವರು ಯಾವಾಗಲೂ ಸ್ವದೇಶಿಗೆ ಬಲವಾದ ಒತ್ತು ನೀಡುತ್ತಿದ್ದರು. ಇದು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಸರ್ಕಾರದ ಸಂಕಲ್ಪದ ಮೂಲಭೂತ ಆಧಾರ ಸ್ತಂಭವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ನನ್ನ ಗೌರವಗಳು. ಅವರ ವ್ಯಕ್ತಿತ್ವ ಮತ್ತು ಕಾರ್ಯಗಳು ದೇಶದ ಜನರನ್ನು ಕರ್ತವ್ಯದ ಹಾದಿಯಲ್ಲಿ ನಡೆಯಲು ಸದಾ ಪ್ರೇರೇಪಿಸುತ್ತಲೇ ಇರುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಪುರುಷರ ಸ್ವಭಾವ ಹೀಗಿದ್ರೆ ಯಾವಾಗ ಹುಡುಗಿನೂ ತಿರುಗಿ ಕೂಡ ನೋಡಲ್ವಂತೆ!

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮ ಗಾಂಧಿಯವರ ಸ್ಮರಣೆ ಮಾಡಿದ್ದು, ದೇಶವನ್ನು ಬೇರ್ಪಡಿಸಿದ ದ್ವೇಷವನ್ನು ಗಾಂಧಿಯವರ ಮಾರ್ಗದಲ್ಲಿ ಮಾತ್ರ ಎದುರಿಸಲು ಸಾಧ್ಯ. ಬಾಪು ಅವರ ಸ್ವಂತ ಮಾರ್ಗ, ಸತ್ಯದ ಬೆಳಕು, ಅಹಿಂಸೆಯ ಶಕ್ತಿ ಮತ್ತು ಪ್ರೀತಿಯ ಕರುಣೆ ಇದರಲ್ಲೇ ಅಡಗಿದೆ. ಹುತಾತ್ಮರ ದಿನದಂದು ರಾಷ್ಟ್ರಪಿತನಿಗೆ ಗೌರವಗಳು ಎಂದು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರಪಿತನ ವಿಚಾರಗಳು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !