ಪ್ರತಿ ವರ್ಷ ಅಕ್ಟೋಬರ್ 24 ರಂದು ಜಾಗತಿಕ ಮಟ್ಟದಲ್ಲಿ ವಿಶ್ವ ಪೋಲಿಯೊ ದಿನ ಆಚರಿಸಲಾಗುತ್ತದೆ. ಈ ದಿನವು ಪೋಲಿಯೊ ರೋಗದ ವಿರುದ್ಧ ಜಾಗೃತಿ ಮೂಡಿಸಲು, ಲಸಿಕೆ ಅಭಿಯಾನಗಳನ್ನು ಪ್ರೋತ್ಸಾಹಿಸಲು ಮತ್ತು ರೋಗ ಮುಕ್ತ ಸಮಾಜದ ಕನಸಿಗಾಗಿ ನಡೆಯುವ ಪ್ರಯತ್ನಗಳನ್ನು ಹಂಚಿಕೊಳ್ಳಲು ಸಮರ್ಪಿತವಾಗಿದೆ. ಅಮೇರಿಕನ್ ವೈರಾಲಜಿಸ್ಟ್ ಜೊನಸ್ ಸಾಲ್ಕ್ ಅವರ ಜನನದ ನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 24 ರಂದು ವಿಶ್ವ ಪೋಲಿಯೊ ದಿನವನ್ನು ಆಚರಿಸಲಾಗುತ್ತದೆ.
ಪೋಲಿಯೊ ಅಥವಾ ಪೋಲಿಯೊಮೈಲಿಟಿಸ್ ಅನ್ನು ಸಾಂಕ್ರಾಮಿಕ ವೈರಲ್ ಕಾಯಿಲೆ ಎಂದು ಹೇಳಲಾಗುತ್ತದೆ. ಕಳೆದ ಕೆಲವು ದಶಕಗಳಲ್ಲಿ ವೈದ್ಯಕೀಯ ವಿಜ್ಞಾನ ಮತ್ತು ಜನಸಾಮಾನ್ಯರ ಸಹಕಾರದಿಂದ ಬಹಳ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.
ಪೋಲಿಯೊ ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ ಅಥವಾ ಮೌಖಿಕ ಮಾರ್ಗದ ಮೂಲಕ ಮತ್ತು ಕಲುಷಿತ ನೀರು ಅಥವಾ ಆಹಾರದ ಮೂಲಕ ಹರಡುತ್ತದೆ. ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ಪೋಲಿಯೊ ಮುಖ್ಯವಾಗಿ ಶಿಶುಗಳಲ್ಲಿ ನರದೋಷವನ್ನು ಉಂಟುಮಾಡುತ್ತವೆ. ಪೋಲಿಯೊವೈರಸ್ ಬಾಯಿ ಅಥವಾ ಉಸಿರಾಟದ ವ್ಯವಸ್ಥೆಯ ಮೂಲಕ ಗಂಟಲು ಮತ್ತು ಕರುಳನ್ನು ಪ್ರವೇಶಿಸಿ ಈ ಪ್ರದೇಶಗಳಿಂದ, ವೈರಸ್ ದೇಹದ ಇತರ ಅಂಗಗಳಿಗೆ ಪ್ರಹರಡುತ್ತವೆ ಮತ್ತು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ವ್ಯಾಕ್ಸಿನ್‌ಗಳ ಮೂಲಕ, ಈ ರೋಗವನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಲು ಸಾಧ್ಯವಾಗಿದೆ. ಜಾಗತಿಕ ಆರೋಗ್ಯ ಸಂಸ್ಥೆಗಳು, ಸರ್ಕಾರಿ ಯೋಜನೆಗಳು ಮತ್ತು ಸಾಮಾಜಿಕ ಅಭಿಯಾನಗಳ ಮೂಲಕ, ಲಕ್ಷಾಂತರ ಮಕ್ಕಳನ್ನು ರಕ್ಷಿಸಲಾಗುತ್ತಿದೆ.
ಸುರಕ್ಷಿತ ಭವಿಷ್ಯಕ್ಕೆ ಲಸಿಕೆ ಮಹತ್ವ: ಪೋಲಿಯೊ ಲಸಿಕೆ ಪಡೆಯುವ ಮೂಲಕ ಮಕ್ಕಳ ಶಕ್ತಿಯುತ ಭವಿಷ್ಯವನ್ನು ಖಾತರಿಪಡಿಸಬಹುದು. ಈ ದಿನವು ಪೋಷಕರಿಗೆ, ಶಿಕ್ಷಕರಿಗೆ ಮತ್ತು ಸಮುದಾಯದವರಿಗೆ ಮಕ್ಕಳ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮಹತ್ವಪೂರ್ಣ ವೇದಿಕೆ ಆಗಿದೆ.

