ಮೇಷ
ಶೀಘ್ರ ಪ್ರಗತಿ ಸಾಽಸಬೇಕು ಎನ್ನುವುದು ನಿಮ್ಮ ಆಸೆ. ತಾಳ್ಮೆ ಬೆಳೆಸಿಕೊಳ್ಳಿ. ದುಡುಕು ಹಾನಿ ತಂದೀತು. ಕೌಟುಂಬಿಕ ಸಹಕಾರ.
ವೃಷಭ
ಕೆಲಸದಲ್ಲಿ ಪ್ರಗತಿ. ಹಿರಿಯರ ಮೆಚ್ಚುಗೆ. ಮನೆಯಲ್ಲಿ ಕೆಲವು ಬದಲಾವಣೆ ಆದೀತು. ಆರೋಗ್ಯ ಸಮಸ್ಯೆ ನಿವಾರಣೆ, ನಿರಾಳತೆ. ಮಿಥುನ
ಕಾರ್ಯ ಪೂರೈಸಲು ಹೆಚ್ಚು ಪರಿಶ್ರಮ ಬೇಕು. ಅರ್ಧಕ್ಕೆ ಕೈ ಬಿಡಬೇಡಿ. ವಿವಾಹ ಪ್ರಸ್ತಾಪ ಸಫಲ ಆಗಲಿದೆ. ಆರೋಗ್ಯ ಸಮಸ್ಯೆ ಸಂಭವ. ಕಟಕ
ಈ ದಿನ ನಿಮಗೆ ಪ್ರತಿಕೂಲ. ಪ್ರಮುಖ ಕಾರ್ಯ ಇಂದು ಬೇಡ. ಸಂಗಾತಿ ಜತೆ ಸಂಘರ್ಷ ಸಂಭವ. ತಾಳ್ಮೆಯ ವ್ಯವಹಾರ ಅಗತ್ಯ. ಸಿಂಹ
ಎಲ್ಲ ಸುಸೂತ್ರವಾಗಿ ನಡೆದರೂ ಮನಸ್ಸಿಗೆ ಸಮಾಧಾನವಿರದು. ಏನೋ ಅತೃಪ್ತಿ. ಕೆಲವರ ವರ್ತನೆಗೆ ಅಸಹನೆ. ಧ್ಯಾನ, ಅಧ್ಯಾತ್ಮ ಸಹಕಾರಿ.
ಕನ್ಯಾ
ಆಪ್ತರ ಜತೆಗಿನ ಭಿನ್ನಮತ ಪರಿಹರಿಸಿ. ಪ್ರೀತಿಗೆ ಸಂಬಂಧಿಸಿದ ಬಿಕ್ಕಟ್ಟು ನಿವಾರಿಸಿ. ವೃತ್ತಿಯಲ್ಲಿ ವಾಗ್ವಾದ , ಸಂಘರ್ಷ ನಡೆದೀತು. ತುಲಾ
ಕೆಲ ಕೌಟುಂಬಿಕ ವಿಚಾರ ಇತ್ಯರ್ಥಕ್ಕೆ ದಿನ ಮೀಸಲು. ಉತ್ಸಾಹ ಹೆಚ್ಚುವ ಬೆಳವಣಿಗೆ. ಕಾರ್ಯ ಪ್ರಗತಿ. ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ. ವೃಶ್ಚಿಕ
ನಿಮ್ಮ ಸುತ್ತಮುತ್ತ ಹರ್ಷದ ವಾತಾವರಣ. ಇತರರ ಉತ್ಸಾಹದಲ್ಲಿ ಭಾಗಿ. ಸಣ್ಣ ವಿಷಯಕ್ಕೆ ವಾಗ್ವಾದ ನಡೆಸಲು ಹೋಗದಿರಿ. ಖರ್ಚು ನಿಯಂತ್ರಣ.
ಧನು
ನಿಮ್ಮ ಕಾರ್ಯಕ್ಕೆ ಸಹೋದ್ಯೋಗಿ ಬೆಂಬಲ. ಖರೀದಿ ಹುಮ್ಮಸ್ಸಿನಿಂದ ಖರ್ಚು ಹೆಚ್ಚಬಹುದು. ಆಸ್ತಿ ಖರೀದಿಗೆ ಕಾಲ ಸದ್ಯ ಕೂಡಿಬರದು. ಮಕರ
ಪ್ರಮುಖ ಕಾರ್ಯ ಇಂದು ಸಾಽಸುವಿರಿ. ವೃತ್ತಿಯಲ್ಲಿ ಯಶಸ್ಸು. ಸ್ವಂತ ಉದ್ಯೋಗಿಗಳಿಗೆ ಆರ್ಥಿಕ ಉನ್ನತಿ. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ.
ಕುಂಭ
ಯುವಜನರು ಹೆತ್ತವರ ಜತೆ ಸಂಘರ್ಷ ನಡೆಸಿಯಾರು. ಉದ್ದಿಮೆ ಯಲ್ಲಿ ಧನಹಾನಿ. ಇತರರ ಮನಸ್ಸಿಗೆ ಘಾಸಿ ಎಸಗದಿರಿ. ವಿನಯವಿರಲಿ. ಮೀನ
ಕಾರ್ಯ ಸರಾಗ. ಅಡ್ಡಿಗಳ ನಿವಾರಣೆ. ಖರ್ಚು ಕಡಿಮೆ ಮಾಡಲು ಗಮನ ಕೊಡಿ. ಸಣ್ಣ ಸಮಸ್ಯೆಯೊಂದು ನೆಮ್ಮದಿ ಕೆಡಿಸುವುದು.



