Sunday, October 12, 2025

ದಿನಭವಿಷ್ಯ: ಉದ್ಯೋಗದಲ್ಲಿ ಚಿಂತೆಯಾ? ಶೀಘ್ರವೇ ಪರಿಹಾರ ಸಿಗಲಿದೆ

ಮೇಷ
ಉದ್ಯೋಗದಲ್ಲಿ ಮೂಡಿರುವ ಚಿಂತೆ ಬೇಗ ಪರಿಹಾರ ಕಾಣಲಿದೆ. ಗ್ರಹಗತಿ ಪೂರಕವಾಗಿದೆ.  ಬಲ್ಲವರ ಸಹಕಾರ ಪಡೆಯಿರಿ.              
ವೃಷಭ
ಕಾರ್ಯಸಾಧನೆಗೆ ಈ ದಿನ ನಿಮ್ಮಿಂದ ಹೆಚ್ಚಿನ ಪ್ರಯತ್ನ ಅಗತ್ಯ. ಅರೆಮನಸ್ಸಿನ  ಪ್ರಯತ್ನ ಸಾಲದು. ಕಾಲು ನೋವು ಕಾಣಿಸಿಕೊಂಡೀತು.    
ಮಿಥುನ
  ನಿಮ್ಮ ಮೇಲೆ ನೀವೇ ಹೆಚ್ಚಿನ ಒತ್ತಡ ಹಾಕಿಕೊಳ್ಳುವಿರಿ. ಲಘು ವಿಚಾರಗಳನ್ನು ಗಂಭೀರ ವಾಗಿ ಪರಿಗಣಿಸುವುದೇ ಇದಕ್ಕೆ ಕಾರಣ.      
ಕಟಕ
ನಿಮ್ಮ ಕಾರ್ಯದಲ್ಲಿ ಇಂದು ತೊಡಕು ಮೂಡಿ ಬರಲಿದೆ. ಸರಿಯಾಗಿ ನಿಭಾಯಿಸಿ. ಆತುರದ ಕ್ರಮ ಸಲ್ಲದು. ಆಪ್ತರ ಅವಗಣನೆ,  ಬೇಸರ.  
ಸಿಂಹ
ಕೆಲವರು ನಿಮ್ಮ  ಪ್ರಾಮುಖ್ಯತೆಯನ್ನು ಅರಿವು ಮೂಡಿಸಲಿದ್ದಾರೆ. ನಿಮ್ಮ ಕುರಿತಾದ ಕೀಳರಿಮೆ ಬಿಡಿ. ಅನಾರೋಗ್ಯ ಇಂದು ಪರಿಹಾರ.  
ಕನ್ಯಾ
ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ನಿಮ್ಮ ದೈನಂದಿನ ವ್ಯವಹಾರ ಇದರಿಂದ ಕುಂಠಿತ ಆದೀತು. ಸಾಂಸಾರಿಕ ಸಾಮರಸ್ಯಕ್ಕೆ ಧಕ್ಕೆ.  
ತುಲಾ
ಬಂಧುಗಳ ಜತೆ ಸಂಬಂಧ ಕೆಡಬಹುದು. ಅಪಾತ್ರರಿಗೆ ನೆರವು ನೀಡದಿರಿ.  ಹೊಸ ವ್ಯವಹಾರ ಕೂಡಲೇ ಕೈ ಹಿಡಿಯದು.
ವೃಶ್ಚಿಕ
 ವೃತ್ತಿ ಕ್ಷೇತ್ರದಲ್ಲಿ ಏರುಪೇರು. ನಿಮ್ಮ ಮೇಲೂ ಪರಿಣಾಮ ಆದೀತು. ತಾಳ್ಮೆಯಿಂದ ನಿಭಾಯಿಸಿ. ಚಾಡಿ ಮಾತು ಕೇಳಬೇಡಿ.        
ಧನು
 ಕಳೆದ ಕೆಲ ದಿನಗಳಿಂದ ನಿಮ್ಮ ಘನತೆ ಹೆಚ್ಚುತ್ತಿದೆ. ಇದೇ ಮಟ್ಟ ಕಾಯ್ದುಕೊಳ್ಳಿ. ನಿಮ್ಮ ಜೀವನದ ಪ್ರಮುಖ ವ್ಯಕ್ತಿಯ ಭೇಟಿ ಸಂಭವ.
ಮಕರ
 ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಿರಿ. ಭಿನ್ನಾಭಿಪ್ರಾಯ ನಿವಾರಿಸಲು ಇದು ಅವಶ್ಯ. ಸಣ್ಣ ಆರೋಗ್ಯ ಸಮಸ್ಯೆ ಕಾಣಿಸೀತು.
ಕುಂಭ
ಆರಂಭಿಸಿದ ಕಾರ್ಯ ಅರ್ಧದಲ್ಲೆ ಬಿಡಬೇಡಿ. ಭಾವುಕತೆ ನಿಮ್ಮನ್ನು ವಾಸ್ತವದಿಂದ ದೂರವಿರಿಸದಂತೆ ಎಚ್ಚರಿಕೆ ವಹಿಸಿರಿ.  
 ಮೀನ
ಸವಾಲಿನ ದಿನ. ಮನೆಯಲ್ಲೂ ವೃತ್ತಿಯಲ್ಲೂ ಹೊಣೆ ಹೆಚ್ಚಳ. ಇಷ್ಟವಿಲ್ಲದ ಪ್ರಯಾಣ ಸಂಭವ. ಸಂಗಾತಿ ಜತೆ ವಾಗ್ವಾದಕ್ಕೆ ಆಸ್ಪದ ಕೊಡಬೇಡಿ.

error: Content is protected !!