February 3, 2026
Tuesday, February 3, 2026
spot_img

ದಿನಭವಿಷ್ಯ: ಇತರರಿಗೆ ಒಳ್ಳೆಯದು ಮಾಡಿ, ಆದರೆ ನಿಮ್ಮ ಒಳ್ಳೆತನ ದುರುಪಯೋಗ ಆಗದಿರಲಿ

ಮೇಷ
ಶಾಂತ ಮತ್ತು ದೃಢ ಮನಸ್ಥಿತಿ ಇಂದು ಅಗತ್ಯ. ಅನ್ಯರ ವಿಚಾರದಲ್ಲಿ ಮೂಗು ತೂರಿಸಬೇಡಿ. ಸಣ್ಣ ವಿಷಯಕ್ಕೂ ಹೆಚ್ಚು ಉದ್ವೇಗಗೊಳ್ಳದಿರಿ.    
ವೃಷಭ
ಗೊಂದಲದ ದಿನ. ಮುಖ್ಯ ವಿಷಯದಲ್ಲಿ ಹೇಗೆ ವ್ಯವಹರಿಸಬೇಕು ಎಂಬುದು ಅರಿಯದ ಸ್ಥಿತಿ. ಉದ್ವಿಗ್ನತೆ, ಆಶಾಂತಿ ಕಾಡಲಿದೆ.
ಮಿಥುನ
 ಅವಶ್ಯ ಕಾರ್ಯಕ್ಕೆ ಹೆಚ್ಚಿನ ಗಮನ ಕೊಡಿ. ಬೇರೆ ಕೆಲಸ ಬದಿಗಿರಿಸಿ. ಯುವಕರು ಪ್ರೀತಿಯ ಭಾವದಲ್ಲಿ ಸಿಲುಕುವಿರಿ. ಸ್ಪಂದನೆಗೆ ಕಾಯುವಿರಿ.
ಕಟಕ
ಸಮಸ್ಯೆಯನ್ನು ಹಾಗೇ ಬಿಡಬೇಡಿ. ತಕ್ಷಣ ಪರಿಹರಿಸಲು ಗಮನ ಕೊಡಿ. ಉದ್ವಿಗ್ನತೆ ಮಧ್ಯೆಯೂ ಸಂತೋಷ ಪಡುವ ಕ್ಷಣ ಒದಗಲಿದೆ.  
ಸಿಂಹ
ಹೊಸ ಸವಾಲು ಎದುರಿಸುವಿರಿ. ಆದರೆ ನಿಮಗೆ ಹಾನಿ ಒದಗದು. ಜಢವಾಗಿ ಕೂರದೆ ದೈಹಿಕ ಅಭ್ಯಾಸದಲ್ಲಿ ತೊಡಗಿ. ಪ್ರೀತಿಯಲ್ಲಿ ಯಶಸ್ಸು.  
ಕನ್ಯಾ
ಇತರರ ಬಗ್ಗೆ ಮಮತೆ ತೋರುವ ನಿಮ್ಮ ಸ್ವಭಾವ ದುರುಪಯೋಗ ಮಾಡಿಕೊಂಡಾರು. ವೃತ್ತಿಯಲ್ಲಿ ಉಂಟಾಗಿದ್ದ ಸಮಸ್ಯೆ ಪರಿಹಾರ.  
ತುಲಾ
ಹಲವಾರು ಬೆಳವಣಿಗೆ ಏಕಕಾಲದಲ್ಲಿ ಉಂಟಾದೀತು. ತಕ್ಷಣ ಪ್ರತಿಸ್ಪಂದಿಸಲು ವಿ-ಲರಾಗುವಿರಿ. ಕಾದು ನೋಡುವುದೊಳಿತು.    
ವೃಶ್ಚಿಕ
 ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ತೋರಬೇಕು. ಅಂತಹ ಪರಿಸ್ಥಿತಿ ನಿಮಗೆ ಇಂದು ಒದಗಬಹುದು. ನಿಷ್ಕ್ರಿಯರಾಗಿ ಕೂರದಿರಿ. ಸೂಕ್ತ ನೆರವು ಲಭ್ಯ.
ಧನು
  ವ್ಯಕ್ತಿಯೊಬ್ಬರ
ಬಗ್ಗೆ ಮೆಚ್ಚುಗೆ ಬೆಳೆದೀತು. ಸಂಬಂಧ ಗಾಢವಾ
ದೀತು. ವೃತ್ತಿಯಲ್ಲಿ ಅನ್ಯರಿಂದ ಮಾತ್ಸರ್ಯ ಎದುರಿಸುವಿರಿ.
ಮಕರ
ಗುರಿ ತಲುಪಲು ಅಸಾಧ್ಯವಾದರೆ ಹತಾಶೆ ಬೇಡ. ಹಿನ್ನಡೆ ತಾತ್ಕಾಲಿಕ. ಉತ್ತಮ ಅವಕಾಶ ಮುಂದಿನ ದಿನಗಳಲ್ಲಿ ನಿಮಗೆ ಕಾದಿದೆ.  
ಕುಂಭ
ಬಿಡುವಿರದ ದಿನ. ಬಸವಳಿಕೆ, ಗೊಂದಲ ಕಾಡಬಹುದು. ಆರೋಗ್ಯ ಸಮಸ್ಯೆ. ಬಂಧುವೊಬ್ಬರು ನಿಮ್ಮನ್ನು ದುರುಪಯೋಗ ಮಾಡಿಕೊಂಡಾರು.  
 ಮೀನ
ನಿಮ್ಮ ಸುತ್ತ ನೆಗೆಟಿವ್ ಮಂದಿಯೇ ತುಂಬಿದ್ದಾರೆ. ಅವರ ಪ್ರಭಾವಕ್ಕೆ ಸಿಲುಕದಿರಿ. ಆಶಾವಾದ ಮುಖ್ಯ. ಸಮಸ್ಯೆ ಪರಿಹಾರಕ್ಕೆ ಶ್ರಮ ಪಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !