ಮೇಷ
ವೃತ್ತಿಯಲ್ಲಿ ಹೆಚ್ಚಿನ ಹೊಣೆ. ಅದನ್ನು ಸರಿಯಾಗಿ ನಿಭಾಯಿಸಿ ಶ್ಲಾಘನೆ ಪಡೆಯುವಿರಿ. ಅನಿರೀಕ್ಷಿತ ಖರ್ಚು ಒದಗುವುದು. ವೃಷಭ
ಮನೆಯಲ್ಲಿ ಉತ್ಸಾಹದ ಸನ್ನಿವೇಶ. ಲೋಪ ಉಂಟಾದರೂ ಸಂತೋಷಕ್ಕೆ ಭಂಗ ಬರದು. ಕುಟುಂಬಸ್ಥರ ಉತ್ತಮ ಸಹಕಾರ.
ಮಿಥುನ
ಅಹಿತಕರ ಪ್ರಸಂಗ. ವಿಶ್ವಾಸ ಕುಂಠಿತ. ನಿರ್ಭೀತಿಯಿಂದ ಕಾರ್ಯ ನಿರ್ವಹಿಸಿ. ಯಶ ಸಿಗಲಿದೆ. ಕೌಟುಂಬಿಕ ಸಮ್ಮಿಲನ. ಹೆಚ್ಚು ಖರ್ಚು.
ಕಟಕ
ಕಷ್ಟಕರ ಪರಿಸ್ಥಿತಿ ಯನ್ನು ವಿಶ್ವಾಸದಿಂದ ಎದುರಿಸುವಿರಿ. ಕೌಟುಂಬಿಕ ವಿಷಯದಲ್ಲಿ ಮಹತ್ವದ ಬೆಳವಣಿಗೆ. ಸಮಸ್ಯೆ ಪರಿಹಾರ.
ಸಿಂಹ
ಕೆಲಸದ ಒತ್ತಡ. ಮಧ್ಯಾಹ್ನದ ವೇಳೆಗೆ ಎಲ್ಲ ಸುರಳೀತ. ವಾಗ್ವಾದಕ್ಕೆ ಆಸ್ಪದ ಕೊಡಬೇಡಿ. ಪ್ರೀತಿಯಲ್ಲಿ ಯಶ. ಖರ್ಚು ನಿಯಂತ್ರಿಸಿ.
ಕನ್ಯಾ
ಕೆಲಸದಲ್ಲಿ ಹೆಚ್ಚು ಬದ್ಧತೆ ತೋರುವಿರಿ. ಜಡತ್ವ ಬಿಡುವಿರಿ. ಹರಿತ ವಸ್ತುವಿನಿಂದ ಗಾಯವಾದೀತು, ಎಚ್ಚರದಿಂದ ನಿರ್ವಹಿಸಿ.
ತುಲಾ
ಕೆಲವು ಸಂದರ್ಭ ಕಠಿಣ ನಿಲುವು ಅನಿವಾರ್ಯ. ಅಂತಹ ಪ್ರಸಂಗ ನಿಮಗಿಂದು ಒದಗಬಹುದು. ಎಲ್ಲರ ಸಹಕಾರ ಪಡೆಯಿರಿ.
ವೃಶ್ಚಿಕ
ವೃತ್ತಿಯಲ್ಲಿ ಶುಭ ಬೆಳವಣಿಗೆ. ಆಪ್ತರಿಂದ ಅಚ್ಚರಿಯ ಕೊಡುಗೆ ದೊರಕೀತು. ಕೌಟುಂಬಿಕ ಭಿನ್ನಮತ ಪರಿಹಾರ, ಸಮಾಧಾನಕರ ಪರಿಸ್ಥಿತಿ.
ಧನು
ಸಂಗಾತಿ ಜತೆ ಭಿನ್ನಮತ ಉಲ್ಬಣಕ್ಕೆ ಹೋಗದಂತೆ ನೋಡಿ. ಹೊಂದಾಣಿಕೆ ಮುಖ್ಯ. ನಿಮ್ಮದೇ ನಿಲುವಿಗೆ ಹಠ ಹಿಡಿಯಬೇಡಿ.
ಮಕರ
ಸಣ್ಣಪುಟ್ಟ ಸಂಘರ್ಷ ತಪ್ಪಿಸಿ. ಮನಶ್ಯಾಂತಿ ಕಾಪಾಡಲು ಆದ್ಯತೆ ಕೊಡಿ. ಕೆಲವರ ಒತ್ತಡ ನಿಭಾಯಿಸಲು ಕಷ್ಟ ಪಡುವಂತಾದೀತು.
ಕುಂಭ
ನಿಮ್ಮ ಮನಶ್ಯಾಂತಿ ಹಾಳು ಮಾಡಲು ಕೆಲವರ ಯತ್ನ. ವದಂತಿಗೆ ಕಿವಿಗೊಡಬೇಡಿ. ಆಪ್ತರ ವಿಶ್ವಾಸ ಕಳಕೊಳ್ಳಬೇಡಿ. ಹಣದ ಸಮಸ್ಯೆ ನಿವಾರಣೆ.
ಮೀನ
ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವಿರಿ. ಆಸಕ್ತ ವ್ಯಕ್ತಿಯ ಭೇಟಿ ಸಂಭವ. ಸ್ನೇಹ ದೀರ್ಘ ಬೆಳೆದೀತು. ಕೌಟುಂಬಿಕ ವಾಗ್ವಾದಕ್ಕೆ ಆಸ್ಪದ ನೀಡದಿರಿ.
ದಿನಭವಿಷ್ಯ: ಇಂದು ಮನಸ್ಸೆಲ್ಲಾ ಕೆಲಸದ ಮೇಲೆ, ಅಂತೆಯೇ ಫಲ ಸಿಗಲಿದೆ

