ಮೇಷ
ಆದಾಯದಲ್ಲಿ ಹೆಚ್ಚಳ. ನಿಮ್ಮ ಚಿಂತನೆಗೆ ಜನಬೆಂಬಲ. ಸಂತಾನ ಆಕಾಂಕ್ಷಿಗಳಿಗೆ ಪೂರಕ ಬೆಳವಣಿಗೆ. ಕಲಾವಿದರಿಗೆ ಶ್ಲಾಘನೆ, ಮನ್ನಣೆ.
ವೃಷಭ
ನಿರುತ್ಸಾಹದ ದಿನ. ಯಾವುದೇ ಕೆಲಸ ಮಾಡಲು ಮನಸ್ಸಿಲ್ಲ. ಕೆಲ ವಿಚಾರದಲ್ಲಿ ಗೊಂದಲ, ಅತೃಪ್ತಿ. ಒಳ್ಳೆ ಅವಕಾಶ ಬಂದರೆ ಕಳಕೊಳ್ಳದಿರಿ.
ಮಿಥುನ
ಹಣದ ವಿಚಾರದಲ್ಲಿ ತಾರ್ಕಿಕ ನಿರ್ಧಾರ ತಾಳಿ. ವೃತ್ತಿಯ ಒತ್ತಡ ದೂರವಿಟ್ಟು ಆಪ್ತರ ಜತೆ ವಿರಾಮದಲ್ಲಿ ಕಳೆಯಿರಿ. ಕೌಟುಂಬಿಕ ಸಮಾಧಾನ.
ಕಟಕ
ಹೊಸ ಯೋಜನೆ ತಡೆಹಿಡಿಯಿರಿ. ಕೆಲವರ ಜತೆ ವರ್ತನೆಯಲ್ಲಿ ತಾಳ್ಮೆ ವಹಿಸಿ. ಆವೇಶಪಟ್ಟರೆ ಅವರಿಂದ ಸಿಗುವ ಪ್ರಯೋಜನ ತಪ್ಪಬಹುದು.
ಸಿಂಹ
ಅಚ್ಚರಿದಾಯಕ ಬೆಳವಣಿಗೆ ಸಂಭವ. ಸಂಬಂಧದ ಮೌಲ್ಯ ಅರಿಯಿರಿ. ಆವೇಶದಿಂದ ಬಂಧುತ್ವ ಕಡಿಯಬೇಡಿ. ಆದಾಯ ಹೆಚ್ಚಳ ಸಂಕೇತ.
ಕನ್ಯಾ
ಮನೆಯಲ್ಲಿ ಶಾಂತಿ ನೆಲೆಸಬೇಕಾದರೆ ವಾಗ್ವಾದ ನಡೆಸದಿರಿ. ನಿಮ್ಮ ವರ್ತನೆಯಲ್ಲಿ ವೈರುಧ್ಯ ತೋರಬೇಡಿ. ಹೊಂದಾಣಿಕೆಯಿರಲಿ.
ತುಲಾ
ನೀವು ಹಿಂದೆ ಎಸಗಿದ ಕಾರ್ಯದ ಬಗ್ಗೆ ಕೆಲವರು ಅಸಮಾಧಾನ ತೋರಿಯಾರು. ತಾಳ್ಮೆ ಕಾಯ್ದರೆ ಎಲ್ಲವೂ ಸರಿ ಹೋಗಲಿದೆ.
ವೃಶ್ಚಿಕ
ನಿಮ್ಮ ಸುತ್ತ ಉತ್ತಮ ಅವಕಾಶಗಳಿವೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕೊರಗುತ್ತಾ ಕೂರಬೇಡಿ. ಮನಶ್ಯಾಂತಿ ಕೆಡಿಸುವ ಪ್ರಸಂಗ ಸಂಭವ.
ಧನು
ಗುಣಾತ್ಮಕ ಮನಸ್ಥಿತಿ ಉತ್ತಮ -ಲ ತರಲಿದೆ. ನಿಮ್ಮ ಈವರೆಗಿನ ದಾರಿಯ ಸಿಂಹಾವಲೋಕನ ಮಾಡಿ. ತಪ್ಪು ನಡೆದಿದ್ದರೆ ಅದನ್ನು ತಿದ್ದಿಕೊಳ್ಳುವುದೊಳಿತು.
ಮಕರ
ದೂರದಿಂದ ಪ್ರಮುಖ ಸುದ್ದಿ ಕೇಳಲು ಕಾತರಿಸಿದ್ದರೆ, ಇಂದು ಅದು ಸ-ಲವಾದೀತು. ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿ.
ಕುಂಭ
ನಿಮ್ಮ ಪ್ರತಿಕೂಲ ಪರಿಸ್ಥಿತಿಯಲ್ಲೂ ವ್ಯಕ್ತಿಯೊಬ್ಬರು ನಿಮ್ಮ ಪರವಾಗಿ ನಿಲ್ಲುವರು. ಕೌಟುಂಬಿಕ ಸಮಸ್ಯೆ ಜಾಣ್ಮೆಯಿಂದ ಪರಿಹರಿಸಿ.
ಮೀನ
ಹೃದಯದ ಭಾವನೆಗೆ ಬೆಲೆ ಕೊಡಿ. ಆತ್ಮೀಯರನ್ನು ದೂರ ಸರಿಸಬೇಡಿ. ವೃತ್ತಿಯಲ್ಲಿ ಕಠಿಣ ನಿರ್ಧಾರ ತಾಳಲು ಹಿಂಜರಿಕೆ ಬೇಕಿಲ್ಲ.
ದಿನಭವಿಷ್ಯ: ಮನೆಯಲ್ಲಿ ಶಾಂತಿ ನೆಲೆಸಬೇಕಾ? ಅದು ನಿಮ್ಮಿಂದ ಮಾತ್ರ ಸಾಧ್ಯ

